ಬೆಂಗಳೂರು : ಲಕ್ಷಾಂತರ ರೂಪಾಯಿ ಹಣ ಪಡೆದು ಬೆಸ್ಕಾಂಗೆ ನಕಲಿ ನೇಮಕಾತಿ ಮಾಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ವೈಭವ್, ಶಿವಪ್ರಸಾದ್, ವಿಜಯ್ ಕುಮಾರ, ಪ್ರದೀಪ್, ಪುರುಷೋತ್ತಮ ಎಂದು ಗುರುತಿಸಲಾಗಿದೆ.
ಆರೋಪಿಗಳು ಬೆಸ್ಕಾಂ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ ಹೆಸರಲ್ಲಿ ನಕಲಿ ಸೀಲು ಹಾಕಿ ನಕಲಿ ನೇಮಕಾತಿ ಆರೋಪ ಮಾಡಿದ್ದಾರೆ. ಹಣ ಕೊಟ್ಟವರಿಗೆ ವಿದ್ಯುತ್ ಕಂಪನಿ ಅಧೀಕ್ಷಕರ ಹೆಸರಿನಲ್ಲಿ ನಕಲಿ ಸೀಲು ಹಾಕಿ ನೇಮಕಾತಿ ಪತ್ರ ನೀಡಿದ್ದಾರೆ ಎನ್ನಲಾಗಿದೆ. ನೇಮಕಾತಿ ಪತ್ರ ಹಿಡಿದು ಕಚೇರಿಗೆ ಬಂದಾಗ ಅಕ್ರಮ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.