ಬೆಂಗಳೂರು: ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇಂದೂ ಸಹ ಬೆಂಗಳೂರಿಗೆ ಬರುತ್ತಿಲ್ಲ ಎಂದು ತಿಳಿದುಬಂದಿದೆ. ಪ್ರಜ್ವಲ್ ರೇವಣ್ಣ ಜರ್ಮನ್ನ ಮ್ಯೂನಿಚ್ನಿಂದ ಬೆಂಗಳೂರಿಗೆ ಬುಕ್ ಆಗಿದ್ದರೂ ಪ್ರಜ್ವಲ್ ರೇವಣ್ಣ ವಿಮಾನವನ್ನ ಏರಿಲ್ಲ ಎಂದು ತಿಳಿದುಬಂದಿದೆ.
ಮ್ಯೂನಿಷ್ ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್ ರೇವಣ್ಣ ಇಂದು ಬೆಂಗಳೂರು ಫ್ಲೈಟ್ ಏರಬಹುದು ಎಂದು ಎಸ್ಐಟಿ ಅಧಿಕಾರಿಗಳು ಕಾದು ಕುಳಿತಿದ್ದರು. ಆದರೆ ವಿಮಾನ ಟೆಕ್ ಆಫ್ ಆಗಿದ್ದು, ಪ್ಯಾಸೇಂಜರ್ ಲಿಸ್ಟ್ನಲ್ಲಿ ಪ್ರಜ್ವಲ್ ಹೆಸರಿಲ್ಲ ಎಂದು ತಿಳಿದುಬಂದಿದೆ.