ಮುಂಡಗೋಡ : ಮುಂಡಗೋಡ ಪಟ್ಟಣ ಪಂಚಾಯಿತಿ ಸಿಬ್ಬಂದಿ ಬಿಲ್ ಕಲೆಕ್ಟರ್ ಮಂಜುನಾಥ್ ಮುಚ್ಚಂಡಿ ಅವರನ್ನು ರಿಲೀವ್ ಮಾಡಲಾಗಿದೆ.
ಹಲವಾರು ವರ್ಷಗಳಿಂದ ಸಿಬ್ಬಂದಿ ಂಜುನಾಥ ಮುಚ್ಚಂಡಿ ಮೇಲೆ ಸಾರ್ವಜನಿಕರು ದೂರಿನ ಸುರಿಮಳೆಯನ್ನೇ ಸುರಿಸಿದ್ದರು. ಆದರೂ ಅವರು ರಾಜಕೀಯ ಒತ್ತಡದಿಂದ ಇಲ್ಲಿ ಇರಲು ಯಶಸ್ವಿಯಾಗಿದ್ದರು. ಆದರೆ ಕೆಲವು ತಿಂಗಳ ಹಿಂದೆ ಮಂಜುನಾಥ ಮುಚ್ಚಂಡಿ ಇಲ್ಲಿಂದ ವರ್ಗಾವಣೆಯಾಗಿತ್ತು. ಆದರೂ ಕೂಡ ಮಂಜುನಾಥ ಮುಚ್ಚಂಡಿ ಇಲ್ಲಿಂದ ರಿಲೀವ್ ಮಾಡದಂತೆ ತಡೆಯೊಡ್ಡಿದ್ದರು.
ಆದರೆ ಇದೀಗ ಬ್ರೇಕಿಂಗ್ ನ್ಯೂಸ್ ಬಂದಿದ್ದು, ವರ್ಗಾವಣೆಗೊಂಡಿದ್ದ ಪಟ್ಟಣ ಪಂಚಾಯತಿ ಬಿಲ್ ಕಲೆಕ್ಟರ್ ಮಂಜುನಾಥ್ ಮುಚ್ಚಂಡಿ ಅವರನ್ನು ಪಟ್ಟಣ ಪಂಚಾಯತ ಕಾರ್ಯಾಲಯದಿಂದ ಬಿಡುಗಡೆಗೊಳಿಸಲಾಗಿದೆ.
ಪಟ್ಟಣ ಪಂಚಾಯತ ಅಧ್ಯಕ್ಷರಾದ ಜಯಸುಧಾ ಭೋವಿವಡ್ಡರ್ ಅವರು ಮಂಜುನಾಥ ಮುಚ್ಚಂಡಿ ಬಿಡುಗಡೆಗೊಳಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಮಂಜುನಾಥ ಮುಚ್ಚಂಡಿ ಅವರನ್ನು ಮುಂಡಗೋಡ ಪ.ಪಂ.ಕಾರ್ಯಾಲಯದ ಕರ್ತವ್ಯದಿಂದ ಪದ ಮುಕ್ತಗೊಳಿಸಿ ಬಿಡುಗಡೆ ಮಾಡಿದ್ದಾರೆಂದು ತಿಳಿದು ಬಂದಿದೆ.
ಮಂಜುನಾಥ ಮುಚ್ಚಂಡಿ ಅವರನ್ನು ರಿಲೀವ್ ಮಾಡದಂತೆ ಮುಂಡಗೋಡ ಪ.ಪಂ. ಅಧ್ಯಕ್ಷೆ ಜಯಸುಧಾ ಭೋವಿವಡ್ಡರ ಅವರ ಮೇಲೆ ಕೆಲವರು ಒತ್ತಡ ತಂದಿದ್ದರೆನ್ನಲಾಗಿದೆ.
ಆದರೆ ಯಾವುದಕ್ಕೂ ಜಗ್ಗದ ಪ.ಪಂ. ಅಧ್ಯಕ್ಷರು, ಜನರ ಬೇಡಿಕೆಯ ಹಿನ್ನೆಲೆಯಲ್ಲಿ ರಿಲೀವ್ ಮಾಡಲು ಸೂಚಿಸಿದ್ದರು. ಅದರಂತೆ ಪ.ಪಂ.ಮುಖ್ಯಾಧಿಕಾರಿಗಳು ರಿಲೀವ್ ಮಾಡಿದ್ದಾರೆ.
ಮುಂಡಗೋಡ ಪ.ಪಂ. ಅಧ್ಯಕ್ಷೆ ಜಯಸುಧಾ ಭೋವಿವಡ್ಡರ ಅವರ ಈ ಕಾರ್ಯವನ್ನು ಜನರು ಶ್ಲಾಘಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.