ಗುಂಡಿಯಲ್ಲಿ ಬಿದ್ದ ಆಕಳನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು

Spread the love

ಮುಂಡಗೋಡ : ಮುಂಡಗೋಡ ಸರ್ಕಾರಿ ಆಸ್ಪತ್ರೆಯ ಹಾಳು ಬಿದ್ದ ಶೌಚಾಲಯದ ಗುಂಡಿಯಲ್ಲಿ ಬಿದ್ದ ಆಕಳನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಸೋಮವಾರ ನಡೆದಿದೆ. 

ಈ ಕಾರ್ಯಚರಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಚಂದ್ರಪ್ಪ ಪೂಜಾರ, ಪ್ರಮುಖ ಅಗ್ನಿಶಾಮಕ ನಾಗರಾಜ ಮೂಲಿಮನಿ, ಮಲ್ಲಿಕಾರ್ಜುನ ಮಲ್ಲಿಗವಾಡ, ವೆಂಕಟೇಶ ಪಿ., ಮಹಾಬಲೇಶ್ವರ ಶಿವನಗುಡಿ, ಅಡಿವೆಪ್ಪ ಕರುವಿನಕೊಪ್ಪ, ಹರೀಶ ಪಟಗಾರ, ದುರ್ಗಪ್ಪ ಹರಿಜನ, ಚಮನಸಾಬ ನದಾಫ ಇದ್ದರು.