‘ನಟ ಪುನೀತ್ ರಾಜ್ ಕುಮಾರ್’ 50ನೇ ಹುಟ್ಟು ಹಬ್ಬ ಹಿನ್ನಲೆ: ಅಭಿಮಾನಿಗಳಿಂದ ‘ಅಪ್ಪು ಸಮಾಧಿ’ ದರ್ಶನ

Share Now

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿದ್ದಾರೆ. ಆದರೇ ಅವರ ಸಾಧನೆ, ನಟಿಸಿದಂತ ಚಿತ್ರಗಳ ಮೂಲಕ ಇನ್ನೂ ನೆನಪಾಗಿಯೇ ಉಳಿದಿದ್ದಾರೆ. ಇಂದು ಪುನೀತ್ ರಾಜ್ ಕುಮಾರ್ ಅವರಿಗೆ 50ನೇ ಜನ್ಮ ದಿನದ ಹಿನ್ನಲೆಯಲ್ಲಿ ಅವರ ಸಮಾಧಿ ಸ್ಥಳಕ್ಕೆ ಅಭಿಮಾನಿಗಳ ದಂಡೆ ನೆರೆದಿದೆ. 

ರಾತ್ರಿಯಿಂದಲೇ ಬೆಂಗಳೂರಿನ ಕಂಠೀರವ ಸ್ಟೂಡಿಯೋದಲ್ಲಿರುವಂತ ಅಪ್ಪು ಸಮಾಧಿ ದರ್ಶನಕ್ಕಾಗಿ ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದಾರೆ. ಅಪ್ಪು ಸಮಾಧಿಯ ದರ್ಶನವನ್ನು ಪಡೆಯುತ್ತಿದ್ದಾರೆ.

ಇಂದು ಪುನೀತ್ ರಾಜ್ ಕುಮಾರ್ 50ನೇ ಹುಟ್ಟು ಹಬ್ಬ ಹಿನ್ನಲೆಯಲ್ಲಿ ಅಪ್ಪು ಸಮಾಧಿಯ ದರ್ಶನವನ್ನು ಅಭಿಮಾನಿಗಳು ಸಾಲುಗಟ್ಟಿ ನಿಂತು ಮಡಾುತ್ತಿದ್ದಾರೆ. ಪುನೀತ್ ಅವರ ಕುಟುಂಬಸ್ಥರು ಇಂದು ಸಮಾಧಿ ಸ್ಥಳಕ್ಕೆ ಆಗಮಿಸಿ ಪೂಜೆ ಸಲ್ಲಿಸಲಿದೆ.