ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಿಸಬೇಕಿದೆ : ಸಿಎಂ ಬಸವರಾಜ ಬೊಮ್ಮಾಯಿ

Share Now

ಬೆಂಗಳೂರು : ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯದಲ್ಲಿ ವ್ಯವಸ್ಥೆ ಸುಧಾರಿಸಬೇಕಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ 120 ಅಂಬುಲೆನ್ಸ್ ವಾಹನಗಳನ್ನು ಸೇವೆಗೆ ಸಮರ್ಪಿಸಿದರು. ಈ ವೇಳೆ ಮಾತನಾಡಿದ ಸಿಎಂ ಆರೋಗ್ಯ ಯಾವಾಗ ಕೈಕೊಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಆಂಬುಲೆನ್ಸ್ ವಾಹನಗಳ ಸೌಲಭ್ಯ ಅಘತ್ಯಗತ್ಯ. ಈ ಅಂಬುಲೆನ್ಸ್ ವಾಹನಗಳು ತುರ್ತು ಚಿಕಿತ್ಸೆ ಕೊಡುವ ರೀತಿ ಇರಬೇಕು. ಕರೆ ಮಾಡಿದ ಕೂಡಲೇ ಕರ್ತವ್ಯ ನಿರ್ವಹಿಸಬೇಕು ಎಂದರು.

ಅಲ್ಲದೇ, ಸದ್ಯ ಇದ್ದ ಅಂಬುಲೆನ್ಸ್ ಗಳ ಜೊತೆಗೆ ಇಂದು 120 ಅಂಬುಲೆನ್ಸ್ ಗಳನ್ನು ಲೋಕಾರ್ಪಣೆಗೊಳಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ರೋಗಿಗಳ ಪಟ್ಟ ಸಂಕಷ್ಟ ನಾವೆಲ್ಲ ನೋಡಿದ್ದೇವೆ. ಈ ವೇಳೆ, ಆರೋಗ್ಯ ಎಷ್ಟು ಮುಖ್ಯ ಎಂದು ಗೊತ್ತಾಗಿದೆ. ಕೋರೋನಾ ನಮ್ಮ ಕಣ್ಣು ತೆರೆಸಿದೆ ಎಂದರು. ಇನ್ನು ರಾಯಚೂರು, ಯಾದಗಿರಿ ಕಬಲಬುರಗಿ ಕಡೆ ಅಪೌಷ್ಟಿತಕತೆ ಇದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ವ್ಯವಸ್ಥೆಯ ಸಮಸ್ಯೆ ಇದೆ. ಹೀಗಾಗಿ ಕೋವಿಡ್ ಸಂದರ್ಭದಲ್ಲಿ ಕೆಲ ಅಡಚಣೆ ಉಂಟಾಯಿತು. ಹಾಗಾಗಿ ಸೋಂಕಿತರನ್ನು ರಿಜಿಸ್ಟಾರ್ ಮಾಡುವುದು ಕಷ್ಟವಾಯಿತು. ಇಂತಹ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಗಲಿರುಳು ಶ್ರಮಿಸಿದ್ದಾರೆ. ನ್ನ ಪ್ರಕಾರ 108 ಅಂಬುಲೆನ್ಸ್ ಗಳನ್ನು ಸುಧಾರಿಸಬೇಕು ಎಂದರು.

ಇನ್ನುರಾಜ್ಯದ ಆರೋಗ್ಯ ಸಚಿವರು ಡಾಕ್ಟರ್ ಆಗಿದ್ದಾರೆ. ಅವರು ಆರೋಗ್ಯ ಕ್ಷೇತ್ರಕ್ಕೆ ಬೇಕಿರುವುದನ್ನು ಮಾಡುತ್ತಿದ್ದಾರೆ. ಸುಧಾಕರ್ ಬಹಳ ಬುದ್ದಿವಂತರು. ಬುದ್ದಿವಂತರಾಗಿಯೇ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಡಾ.ಸುಧಾಕರ್ ಅವರ ಕಾಲೆಳೆದರು…