ನ್ಯೂಸ್:22-2-2022(1), ಶಿವಮೊಗ್ಗ ಹಿಂಸಾಚಾರದ ಬಗ್ಗೆ ‘ನ್ಯಾಯಾಂಗ ತನಿಖೆ’ ನಡೆಸಬೇಕು – ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹ

Share Now

ಬೆಂಗಳೂರು: ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷ ( Harsha Murder Case) ಮೃತದೇಹ ಮೆರವಣಿಗೆ ಸಂದರ್ಭದಲ್ಲಿ ಶಾಂತಿ ಕದಡಲು ಬಿಜೆಪಿ, ಆರ್ ಎಸ್ ಎಸ್ ಕಾರಣ. ನಿಷೇಧಾಜ್ಞೆಯ ನಡುವೆಯೂ ಮೆರವಣಿಗೆ ಮಾಡೋದಕ್ಕೆ ಪೊಲೀಸರು ಅನುಮತಿ ಕೊಟ್ಟಿದ್ದೇಕೆ.?

ಸಚಿವ ಈಶ್ವರಪ್ಪ ನಿಷೇಧಾಜ್ಞೆ ಉಲ್ಲಂಘಿಸಿದ್ದಾರೆ. ಶಿವಮೊಗ್ಗ ಹಿಂಸಾಚಾರ ಘಟನೆ ಸಂಬಂಧ ನ್ಯಾಯಾಂಗ ತನಿಖೆ ಆಗಬೇಕು ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ( Ex CM Siddaramaiah ) ಆಗ್ರಹಿಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಹಿಂದೂ ಕಾರ್ಯಕರ್ತನ ಹತ್ಯೆಯಿಂದಾಗಿ ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಹೀಗಿದ್ದೂ ಹರ್ಷ ಪಾರ್ಥೀವ ಶರೀರದ ಮೆರವಣಿಗೆ ಮಾಡಿದ್ದಾರೆ. ಹಿಂದೂ ಸಂಘಟನೆಗಳೇ ಬೀದಿಗಿಳಿದು ಕಲ್ಲು ತೂರಾಟ ನಡೆಸಿದ್ದಾರೆ. ನಿನ್ನೆ ಸಚಿವ ಈಶ್ವರಪ್ಪನವರೇ ಶಾಂತಿ ಕದಡುವಂತ ಕೆಲಸ ಮಾಡಿದ್ದಾರೆ ಎಂದರು.

ಹರ್ಷ ಕೊಲೆಯ ಹಿಂದೆ ಯಾರಿದ್ದಾರೆ ಎನ್ನುವ ಬಗ್ಗೆ ತನಿಖೆಯಾಗಬೇಕು. ಪಿಎಫ್‌ಐ, ಎಸ್ ಡಿ ಪಿಐ ನಿಷೇಧದ ಬಗ್ಗೆ ನಮ್ಮ ತಕರಾರು ಇಲ್ಲ. ಬಿಜೆಪಿ ಸರ್ಕಾರವೇ ಇದೆ. ಈಗ ನಿಷೇಧ ಮಾಡಲಿ. ಹರ್ಷ ಮೆರವಣಿಗೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಪಾಲಿಸಿಲ್ಲ. ಮೆರವಣಿಗೆಗೆ ಅವಕಾಶ ಕೊಡಬಾರದಾಗಿತ್ತು. ಪೊಲೀಸರು ನಿಷೇಧಾಜ್ಞೆ ನಡುವೆಯೂ ಅವಕಾಶ ಕೊಟ್ಟಿದ್ದು ಹೇಗೆ.? ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.