ಮುಂಡಗೋಡ : ಮಾರಿಕಾಂಬಾ ಜಾತ್ರಾ ಗದ್ದುಗೆ ಬಳಿ ವಿದ್ಯುತ್ ಆಘಾತದಿಂದ ಅಸ್ವಸ್ಥಗೊಂಡಿದ್ದ ಮಂಗವೊಂದರ ಜೀವ ಉಳಿಸಲು ಅರಣ್ಯಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಸಮಾಜ ಸೇವಕರಾದ ಶಿವರಾಜ ಶಿರಾಲಿ ಹಾಗೂ ಮೆಹಬೂಬ ನಡೆಸಿದ ಸತತ ಪ್ರಯತ್ನ ಸಾಕರಗೊಳ್ಳಲಿಲ್ಲ. ತೀವ್ರ ಬಳಲಿಕೆ ಹಾಗೂ ವಿದ್ಯುತ್ ಆಘಾತದಿಂದ ಜೂನ್ ೪ರಂದು ಮಂಗ ಸಾವನ್ನಪ್ಪಿದೆ.
ಕೆಲ ದಿನಗಳಿಂದ ಅಸ್ವಸ್ಥಗೊಂಡ ಮಂಗವು ಮಾರಿಕಾಂಬಾ ಜಾತ್ರೆ ಗದ್ದುಗೆ ಬಳಿ ಆಯಾಸದಿಂದ ಬಿದ್ದಿತ್ತು. ಸ್ಥಳೀಯರಾದ ಮೆಹಬೂಬ್ ಅವರಿಂದ ವಿಷಯ ಪಡೆದ ಶಿವರಾಜ ಶಿರಾಲಿ ಹಾಗೂ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಕಾಶೀನಾಥ ಅವರು ಸ್ಥಳಕ್ಕೆ ಆಗಮಿಸಿ ಮಂಗನಿಗೆ ಸೂಕ್ತ ಚಿಕಿತ್ಸೆ ನೀಡಲು ಆಸ್ಪತ್ರೆಗೆ ತೆಗೆದುಕೊಂಡು ಹೋಗಬೇಕೆನ್ನುವಷ್ಟರಲ್ಲಿಯೇ ಮಂಗ ಸಾವನ್ನಪ್ಪಿದೆ. ನಂತರ ಅರಣ್ಯ ಇಲಾಖೆಯ ಸಾಲುಮರದ ತಿಮ್ಮಕ್ಕನ ಉದ್ಯಾನವನದಲ್ಲಿ ಪೂಜೆ ಸಲ್ಲಿಸಿ ಮಂಗನ ಅಂತ್ಯಕ್ರಿಯೆ ಮಾಡಲಾಯಿತು.