Raj Newsline

‘ನಮ್ಮ ಮೆಟ್ರೋ’ ರೈಲಿನಲ್ಲಿ ಹೋಳಿ ಹಬ್ಬ ಆಚರಣೆಗೆ ನಿರ್ಬಂಧ : ಶುಭಾಶಯ ತಿಳಿಸುವ ಮೂಲಕ ಸೂಚಿಸಿದ ‘BMRCL’

ಬೆಂಗಳೂರು : ಇಂದು ಎಲ್ಲೆಡೆ ಹೋಳಿ ಹಬ್ಬದ ಅಂಗವಾಗಿ ಪ್ರತಿಯೊಬ್ಬರೂ ಬಣ್ಣದಲ್ಲಿ ಮಿಂದೆದ್ದು ಅತ್ಯಂತ ಸಡಗರ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸುತ್ತಾರೆ. ಆದರೆ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲಿನಲ್ಲಿ ಹೋಳಿ ಹಬ್ಬ ಆಚರಣೆಗೆ ನಿರ್ಬಂಧ ವಿಧಿಸಲಾಗಿದ್ದು, ಈ ಕುರಿತು BMRCL ಮೆಟ್ರೋ ಪ್ರಯಾಣಿಕರಿಗೆ ಹೋಳಿ ಹಬ್ಬದ ಶುಭಾಶಯ ತಿಳಿಸಿ ಈ ಮೂಲಕ ಸೂಚನೆ ನೀಡಿದೆ. ಹೌದು ನಮ್ಮ ಮೆಟ್ರೋ ರೈಲಿನಲ್ಲಿ ಹೋಳಿ ಹಬ್ಬ ಆಚರಣೆಗೆ ನಿರ್ಬಂಧ ಹೋಳಿ ಮುಗಿಯುವವರೆಗೂ ಮೆಟ್ರೋದಲ್ಲಿ ಬಣ್ಣಗಳಿಗೆ ನಿರ್ಬಂಧ ವಿಧಿಸಲಾಗಿದೆ. ಹೋಳಿ ಹಬ್ಬದ…

Read More

ರಾಯಚೂರಲ್ಲಿ ಸಿಲಿಂಡರ್ ಸ್ಪೋಟಗೊಂಡು 5 ಕುರಿಗಳ ಸಾವು : ಶೆಡ್ ಬೆಂಕಿಹಾಗುತಿ, ದಂಪತಿ ಬಚಾವ್!

ರಾಯಚೂರು : ರಾಯಚೂರಿನಲ್ಲಿ ಘೋರವಾದಂತಹ ದುರಂತ ಸಂಭವಿಸಿದ್ದು, ಅಡುಗೆ ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊಂಡು 5 ಕುರಿಗಳು ಸಾವನ್ನಪ್ಪಿವೆ. ಆದರೆ ಅದೃಷ್ಟವಶಾತ್ ಶೆಡ್ ನಲ್ಲಿ ಇದ್ದಂತಹ ದಂಪತಿಗಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ರಾಯಚೂರಿನ ಏಗನೂರು ಗ್ರಾಮದಲ್ಲಿ ನಡೆದಿದೆ. ಏಗನೂರು ಗ್ರಾಮದ ನರಸಿಂಹಲು ಎಂಬವರು ವಾಸಿಸುವ ಟಿನ್ ಶೆಡ್‌ನಲ್ಲಿ ಘಟನೆ ಸಂಭವಿಸಿದೆ. ಗುಡಿಸಲಿನ ಪಕ್ಕದಲ್ಲಿ ಕಟ್ಟಿಹಾಕಿದ್ದ ಕುರಿಗಳು ಜೀವಂತವಾಗಿ ಮೃತಪಟ್ಟಿವೆ. 40 ಸಾವಿರ ರೂ ನಗದು, 5 ಗ್ರಾಂ ಚಿನ್ನದ ಕಿವಿಯೋಲೆ, ಬೆಳ್ಳಿಯ ಕಾಲ್ಗೆಜ್ಜೆ, ದವಸ-ಧಾನ್ಯಗಳು ಸುಟ್ಟು ಕರಕಲಾಗಿವೆ….

Read More

ಪ್ರಧಾನಿ ಮೋದಿಗೆ ಮಾರಿಷಸ್ ನ ಅತ್ಯುನ್ನತ ಗೌರವ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಪ್ರದಾನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಮಾರಿಷಸ್ನ ಅತ್ಯುನ್ನತ ಗೌರವವಾದ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಮತ್ತು ಕೀ ಆಫ್ ದಿ ಹಿಂದೂ ಮಹಾಸಾಗರವನ್ನು ಸ್ವೀಕರಿಸಿದರು. ಇದು ಉಭಯ ದೇಶಗಳ ನಡುವಿನ ಶತಮಾನಗಳಷ್ಟು ಹಳೆಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಬಂಧುತ್ವಕ್ಕೆ ಗೌರವವಾಗಿದೆ ಎಂದು ಬಣ್ಣಿಸಿದರು. ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರಿಗೆ ದ್ವೀಪ ರಾಷ್ಟ್ರದ 57 ನೇ ರಾಷ್ಟ್ರೀಯ ದಿನಾಚರಣೆಯಲ್ಲಿ ಮಾರಿಷಸ್ ಅಧ್ಯಕ್ಷ ಧರಂ ಗೋಖೂಲ್ ಅವರು…

Read More

ಮುಡಸಾಲಿ ಮಂಜುನಾಥನಿಗೆ ಚಟ್ಟ ಕಟ್ಟಿದ 3ನೇ ಪತ್ನಿ..!

ಹಾವೇರಿ : ಪತ್ನಿಯೊಬ್ಬಳು ತನ್ನ ಪತಿಯನ್ನೇ ಭೀಕರವಾಗಿ ಕೊಲೆ ಮಾಡಿ ಆಕ್ಸಿಡೆಂಟ್ ಎಂದು ಬಿಂಬಿಸಲು ಯತ್ನಿಸಿದ ಘಟನೆ ಬಂಕಾಪುರದ ಬಳಿ ನಡೆದಿದೆ. ಮೃತ ವ್ಯಕ್ತಿ ಮುಂಡಗೋಡ ತಾಲೂಕಿನ ಮುಡಸಾಲಿ ಗ್ರಾಮದ ಮಂಜುನಾಥ ಜಾಧವ್ ಆಗಿದ್ದಾನೆ. ಆತನನ್ನು ಧಾರವಾಡದಲ್ಲಿ ಕೊಲೆ ಮಾಡಿ ಬಂಕಾಪುರದಲ್ಲಿ ಶವ ಎಸೆದು ಹೋಗಲಾಗಿತ್ತು.  ಮೂರನೇ ಪತ್ನಿಯಿಂದ ಹತ್ಯೆ:ಮುಂಡಗೋಡ ತಾಲೂಕಿನ ಮುಡಸಾಲಿ ಗ್ರಾಮದ ನಿವಾಸಿಯಾಗಿರುವ ಮಂಜುನಾಥ ಶಿವಪ್ಪ ಜಾದವ್ (45) ಬರ್ಬರವಾಗಿ ಹತ್ಯೆಯಾಗಿರುವ ವ್ಯಕ್ತಿಯಾಗಿದ್ದಾನೆ. ಈತನನ್ನು ಬ್ಯೂಟಿಪಾರ್ಲರ್ ನಡೆಸುತ್ತಿದ್ದ ಆತನ ಮೂರನೇ ಪತ್ನಿ ಮಧು ಎಂಬಾಕೆಯೇ…

Read More

ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆ : ಔತಣಕೂಟದ ನೆಪದಲ್ಲಿ 3 ಪಕ್ಷಗಳ 56 ಕ್ಕೂ ಹೆಚ್ಚು ಶಾಸಕರಿಂದ ಮಹತ್ವದ ಸಭೆ.!

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆ ನಡೆದಿದ್ದು, ಔತಣಕೂಟದ ನೆಪದಲ್ಲಿ ಕಾಂಗ್ರೆಸ್, ಬಿಜೆಪಿ,ಜೆಡಿಎಸ್ ನ 56 ಕ್ಕೂ ಹೆಚ್ಚು ಶಾಸಕರು ಮಹತ್ವದ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಔತಣಕೂಟದ ನೆಪದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮೂರು ಪಕ್ಷಗಳ 56 ಕ್ಕೂ ಹೆಚ್ಚು ಶಾಸಕರು ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಚಿವ ಸಂತೋಷ್ ಲಾಡ್ ಸೇರಿದಂತೆ ಹಲವು ಘಟಾನುಘಟಿ ನಾಯಕರು…

Read More

ನಂದೀಶ್ವರನಗರದ ವಿವಾಹಿತ ಮಹಿಳೆ ನಾಪತ್ತೆ

ಮುಂಡಗೋಡ : ಇಲ್ಲಿಯ ನಂದೀಶ್ವರ ನಗರದ ವಿವಾಹಿತ ಮಹಿಳೆಯೋರ್ವಳು ನಾಪತ್ತೆಯಾದ ಕುರಿತು ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.  ನಂದೀಶ್ವರ ನಗರದಿಂದ ಅದಿತಿ ಆನಂದ ಬಸ್ತವಾಡ(29) ಎಂಬ ವಿವಾಹಿತೆ ಕಾಣೆಯಾಗಿದ್ದಾಳೆ. ದಿ.7ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯಲ್ಲಿ ಯಾರಿಗೂ ಹೇಳದೆ ಎಲ್ಲಿಯೋ ಹೋದವಳು ಮರಳಿ ಮನೆಗೆ ಬರದೆ ಕಾಣೆಯಾಗಿದ್ದಾಳೆ. ಈ ಕುರಿತಂತೆ ಕಾಣೆಯಾಗಿರುವ ವಿವಾಹಿತಳ ತಂದೆಯಾದ ಅಜ್ಜಪ್ಪ ಮತ್ತಿಗಟ್ಟಿ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ.

Read More

`CM ಸಿದ್ದರಾಮಯ್ಯ’ ಭೇಟಿಯಾದ ತಮಿಳುನಾಡು ಅರಣ್ಯ ಸಚಿವ ಡಾ.ಕೆ.ಪೊನ್ನುಮುಡಿ.!

ಬೆಂಗಳೂರು : ತಮಿಳುನಾಡಿನ ಅರಣ್ಯ ಸಚಿವರಾದ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯರಾದ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಮಾಹಿತಿ ಹಂಚಿಕೊಂಡಿದ್ದು, ತಮಿಳುನಾಡಿನ ಅರಣ್ಯ ಸಚಿವರಾದ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯರಾದ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಅವರು ಇಂದು ನನ್ನನ್ನು ಭೇಟಿಯಾಗಿ ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಮತ್ತು ದಕ್ಷಿಣ ರಾಜ್ಯಗಳ ವಿರೋಧಿ ನಿಲುವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಚರ್ಚಿಸಿದರು. ಸಚಿವರ ನಿಯೋಗದ ಭೇಟಿಗೂ ಮೊದಲು…

Read More

ಗುಂಜಾವತಿ ಇರುವೆ ಗುಡ್ಡಕ್ಕೆ ಬೆಂಕಿ..!

ಮುಂಡಗೋಡ : ತಾಲೂಕಿನ ಗುಂಜಾವತಿ ಬಳಿಯ ಇರುವೆ ಗುಡ್ಡಕ್ಕೆ ಬೆಂಕಿ ಹತ್ತಿಕೊಂಡ ಪರಿಣಾಮವಾಗಿ ಕೆಲವು ಗಿಡಗಳು ಸುಟ್ಟುಹೋದ ಘಟನೆ ನಡೆದಿದೆ.  ರಾತ್ರಿ ಹತ್ತಿಕೊಂಡ ಬೆಂಕಿ ಕೆಲವು ಕಡೆ ಇನ್ನೂ ಆರಿಲ್ಲ ಎನ್ನಲಾಗಿದೆ. ಸಂಬಂಧಪಟ್ಟ ಅರಣ್ಯ ಇಲಾಖೆಯವರು ಈ ಬಗ್ಗೆ ಕೂಡಲೇ ಗಮನ ಹರಿಸಲಿ. ಇರುವೆ ಗುಡ್ಡಕ್ಕೆ ಬೆಂಕಿ ಹತ್ತಲು ಕಾರಣವೇನೆಂಬುದರ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಜನರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ತಿಂಗಳಿಗೆ ಒಮ್ಮೆಯಾದರೂ…

Read More

ಡ್ರಗ್ಸ್ ಕೇಸ್ ನಲ್ಲಿ ನಟಿ ಸಂಜನಾ, ರಾಗಿಣಿಗೆ ‘CCB’ ಶಾಕ್ : ಸುಪ್ರೀಂಕೋರ್ಟ್’ಗೆ ಮೇಲ್ಮನವಿ ಅರ್ಜಿ ಸಲ್ಲಿಕೆ

ಬೆಂಗಳೂರು : ಸ್ಯಾಂಡಲ್‌ವುಡ್​ನಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಡ್ರಗ್ಸ್ ಪ್ರಕರಣದಲ್ಲಿ ನಟಿ ಸಂಜನಾ, ರಾಗಿಣಿಗೆ ಸಿಸಿಬಿ ಶಾಕ್ ನೀಡಿದ್ದು, ಹೈಕೋರ್ಟ್ ಆದೇಶ ರದ್ದುಕೋರಿ ಸಿಸಿಬಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ನಟಿ ಸಂಜನಾ ಮತ್ತು ರಾಗಿಣಿ ಎಫ್ ಐ ಆರ್ ರದ್ದು ಪ್ರಶ್ನಿಸಿ ಸುಪ್ರೀಂಕೋರ್ಟ್’ಗೆ ಸಿಸಿಬಿ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಡ್ರಗ್ಸ್ ಕೇಸ್ ನಲ್ಲಿ ಪ್ರಕರಣ ರದ್ದುಮಾಡುವಂತೆ ನಟಿಯರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅಂತೆಯೇ ನಟಿ ಸಂಜನಾ ಮತ್ತು ರಾಗಿಣಿ ಎಫ್ ಐ ಆರ್ ರದ್ದಗೊಳಿಸಿ ಹೈಕೋರ್ಟ್ ಆದೇಶ…

Read More

ಮುಡಸಾಲಿ ವ್ಯಕ್ತಿ ಬಂಕಾಪುರದ ಬಳಿ ಸಂಶಯಾಸ್ಪದ ಸಾವು..?

ಹಾವೇರಿ : ಜಿಲ್ಲೆಯ ಬಂಕಾಪುರ ಬಳಿ ಮುಂಡಗೋಡಿನ ವ್ಯಕ್ತಿ ಮೃತಪಟ್ಟಿದ್ದಾನೆ. ಬೈಕ್ ಪಕ್ಕದಲ್ಲಿಯೇ ವ್ಯಕ್ತಿ ಸಂಶಯಾಸ್ಪದ ರೀತಿಯಲ್ಲಿ ಸಾವು ಕಂಡಿದ್ದಾನೆ.   ಮುಂಡಗೋಡ ತಾಲೂಕಿನ ಮುಡಸಾಲಿಯ ಮಂಜುನಾಥ ಜಾಧವ್(45) ಅಲಿಯಾಸ್ ಮಂಜು ಮುಡಸಾಲಿ ಎಂಬುವವನೇ ಸಾವನ್ನಪ್ಪಿರೋ ವ್ಯಕ್ತಿ ಎಂದು ಅನುಮಾನಿಸಲಾಗಿದೆ.KA 31 EF 3587 ಸಂಖ್ಯೆಯ ಪಲ್ಸರ್ ಬೈಕ್ ನ ಪಕ್ಕದಲ್ಲೇ ರಕ್ತಸಿಕ್ತವಾಗಿ ಬಿದ್ದಿರೋ ವ್ಯಕ್ತಿಯನ್ನು ಮಂಜುನಾಥ ಜಾಧವ್ ಎಂದು ಹೇಳಲಾಗುತ್ತಿದೆ. ಬಂಕಾಪುರ ಪಟ್ಟಣದ ಹೊರವಲಯದ ರಸ್ತೆ ಪಕ್ಕದಲ್ಲಿ ಈ ಘಟನೆ ನಡೆದಿದೆ.ವ್ಯಕ್ತಿಯ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

Read More