“ಉತ್ತಮ ಆಡಳಿತ, ಅಭಿವೃದ್ಧಿ ಗೆದ್ದಿದೆ” : ದೆಹಲಿಯಲ್ಲಿ ಬಿಜೆಪಿ ಭರ್ಜರಿ ಗೆಲುವಿನ ಬಳಿಕ ‘ಪ್ರಧಾನಿ ಮೋದಿ’ ಮೊದಲ ಪ್ರತಿಕ್ರಿಯೆ

ನವದೆಹಲಿ : ದೆಹಲಿ ಚುನಾವಣೆಯಲ್ಲಿ ಬಿಜೆಪಿಯ ನಿರ್ಣಾಯಕ ವಿಜಯವನ್ನ ಪ್ರಧಾನಿ ನರೇಂದ್ರ ಮೋದಿ ಶನಿವಾರ ಶ್ಲಾಘಿಸಿದ್ದು, ಇದು ಆಡಳಿತ ಮತ್ತು ಅಭಿವೃದ್ಧಿಯ ಗೆಲುವು ಎಂದು ಬಣ್ಣಿಸಿದ್ದಾರೆ. 27 ವರ್ಷಗಳ ನಂತರ ಬಿಜೆಪಿ ನಗರದಲ್ಲಿ ಸರ್ಕಾರ ರಚಿಸಲು ಸಜ್ಜಾಗಿದೆ. ಮಧ್ಯಾಹ್ನ 2.45 ರ ಹೊತ್ತಿಗೆ, ಬಿಜೆಪಿ 13 ಸ್ಥಾನಗಳನ್ನು ಗೆದ್ದಿದೆ ಮತ್ತು ಇತರ 34 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ 11 ಸ್ಥಾನಗಳನ್ನು ಗೆದ್ದಿದೆ ಮತ್ತು ಇತರ 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 70…

Read More

“ಅರವಿಂದ್ ಕೇಜ್ರಿವಾಲ್’ಗೆ ಹಣದ ಮದ ಏರಿದೆ, ನನ್ನ ಸಲಹೆಯನ್ನ ನಿರ್ಲಕ್ಷಿಸಿದರು” : ಅಣ್ಣಾ ಹಜಾರೆ

ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಈ ಕುರಿತು ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಆಮ್ ಆದ್ಮಿ ಪಕ್ಷದ ಸಂಚಾಲಕ ಮತ್ತು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಕ್ಕೆ ಕಿವಿಗೊಡಲಿಲ್ಲ ಮತ್ತು ಮದ್ಯದ ಮೇಲೆ ಮಾತ್ರ ಗಮನ ಹರಿಸಿದ್ದಾರೆ ಎಂದು ಹೇಳಿದರು. “ಅಭ್ಯರ್ಥಿಯ ನಡವಳಿಕೆ ಮತ್ತು ಆಲೋಚನೆಗಳು ಶುದ್ಧವಾಗಿರಬೇಕು, ಜೀವನವು ದೂಷಣೆಯಿಲ್ಲದೆ ಇರಬೇಕು ಮತ್ತು ತ್ಯಾಗ ಇರಬೇಕು ಎಂದು ನಾನು ಯಾವಾಗಲೂ ಹೇಳಿದ್ದೇನೆ. ಈ ಗುಣಗಳು ಮತದಾರರಿಗೆ ಅವರ…

Read More

ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಪಿಲೆಮನ್ ಯಾಂಗ್ ಮೆಚ್ಚುಗೆ.!

ಬೆಂಗಳೂರು : ಮಹಿಳೆಯರನ್ನು ಪ್ರಮುಖ ಫಲಾನುಭವಿಗಳನ್ನಾಗಿ ಕೇಂದ್ರೀಕರಿಸಿ ರಾಜ್ಯದಲ್ಲಿ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಫಿಲೆಮನ್ ಯಾಂಗ್ ಮೆಚ್ಚುಗೆ ಸೂಚಿಸಿದ್ದಾರೆ.  ರಾಜ್ಯದಲ್ಲಿ ಮಹಿಳೆಯರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಾನತೆಯನ್ನು ಕಲ್ಪಿಸಲು ಮಹಿಳಾ ಪರ ಕಾರ್ಯಕ್ರಮಗಳು, ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶ್ಲಾಘಿಸಿದ್ದಾರೆ. ಮಹಿಳಾ ಸಬಲೀಕರಣದಲ್ಲಿ ಗ್ಯಾರಂಟಿಗಳಾದ ಗೃಹಲಕ್ಷ್ಮಿ, ಶಕ್ತಿ ಮತ್ತು ಗೃಹಜ್ಯೋತಿ ಯೋಜನೆಗಳು ಹೇಗೆ ನೆರವಾಗುತ್ತಿವೆ ಎಂಬುದನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು…

Read More

ಬಿಜೆಪಿ ಆಂತರಿಕ ಕಿತ್ತಾಟದಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ: ಅಶೋಕ್

ಬೆಂಗಳೂರು: ಬಿಜೆಪಿ ಆಂತರಿಕ ಕಿತ್ತಾಟದಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. 15-20 ದಿನಗಳಲ್ಲಿ ಎಲ್ಲಾ ಗೊಂದಲಗಳು ಪರಿಹಾರ ಆಗಲಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಪಕ್ಷದ ಸಹ ಉಸ್ತುವಾರಿ ಸುಧಾಕರ್ ರೆಡ್ಡಿಯವರ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಪಕ್ಷದ ವಿಚಾರವನ್ನ ನಾಲ್ಕು ಗೋಡೆ ಮಧ್ಯೆ ಮಾತನಾಡಬೇಕು ಎಂದು ಹೈಕಮಾಂಡ್ ಹೇಳಿದೆ. ನಮ್ಮ ಸಹ ಉಸ್ತುವಾರಿ ಸುಧಾಕರ್ ರೆಡ್ಡಿಯವರು ಕೂಡ ಇದೇ ಹೇಳಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಕಾಂಗ್ರೆಸ್  (Congress) ನಿತ್ಯ ಅಕ್ರಮದಲ್ಲಿ ತೊಡಗಿದೆ. ಲೂಟಿ, ಕಮಿಷನ್,…

Read More

ಶಾಂತವಾದ ಚಿಗಳ್ಳಿಯ ಮೂರು ಪವಾಡ ದೀಪಗಳು : ಟ್ರಸ್ಟನವರು ಏನು ಹೇಳುತ್ತಾರೆ ಗೊತ್ತಾ..?

ಮುಂಡಗೋಡ : ಚಿಗಳ್ಳಿಯ ಶ್ರೀ ಶ್ರೀ ಶ್ರೀ ದೀಪನಾಥೇಶ್ವರ ದೇವಸ್ಥಾನದಲ್ಲಿ ಮೂರು ಪವಾಡ ದೀಪಗಳು ಶಾಂತವಾದ ಬಗ್ಗೆ ಶ್ರೀ ಶ್ರೀ ಶ್ರೀ ದೀಪನಾಥೇಶ್ವರ ದೇವಸ್ಥಾನ ಟ್ರಸ್ಟನ ಶೇಷಾದ್ರಿ ಕೆ. ಅವರು ಹೇಳಿಕೆಯೊಂದನ್ನು ನೀಡಿದ್ದಾರೆ. ಅವರ ಹೇಳಿಕೆಯ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.  ಚಿಗಳ್ಳಿ ಗ್ರಾಮದಲ್ಲಿರುವ ಶ್ರೀ ಶ್ರೀ ಶ್ರೀ ದೀಪನಾಥೇಶ್ವರ ದೇವಸ್ಥಾನದಲ್ಲಿ ಪೂಜೆಯನ್ನು ಮಾಡುತ್ತಿರುವ ವೆಂಕಟೇಶ ಅವರು ಕಳೆದ ತಿಂಗಳು ಜನವರಿ 23ರಂದು ನಿಧನರಾಗಿದ್ದಾರೆ. ತದನಂತರ ಅವರ ಸಂಸ್ಕಾರ ಕಾರ್ಯವನ್ನು ಗೋಕರ್ಣದಲ್ಲಿ ಮಾಡಿಕೊಂಡು ಊರಿಗೆ ಬಂದು ವೈಕುಂಠ ಸಮಾರಂಭ…

Read More

ಚಿಗಳ್ಳಿಯ ಮೂರು ಚಮತ್ಕಾರಿ ದೀಪಗಳು ಆರಿ ಹೋದ ವದಂತಿ ನಿಜವೇ..?

ಮುಂಡಗೋಡ : ಕಳೆದ 45 ವರ್ಷಗಳಿಂದ ಎಣ್ಣೆಯಿಲ್ಲದೆ ಉರಿಯುತ್ತಿದ್ದ ಮೂರು ಚಮತ್ಕಾರಿ ದೀಪಗಳು ಬುಧವಾರ ಆರಿ ಹೋದ ಬಗ್ಗೆ ದಟ್ಟವಾದ ವದಂತಿಗಳು ಎಲ್ಲೆಡೆ ಹಬ್ಬಿದೆ. ಆದರೆ ಈವರೆಗೂ ಈ ವಿಷಯವನ್ನು ಅಧಿಕೃತಗೊಳಿಸಿಲ್ಲ.  ಈ ದೀಪವಿರುವ ದೀಪನಾಥೇಶ್ವರ ದೇವಸ್ಥಾನದ ಆಡಳಿತ ಕಮಿಟಿಯವರು ಈ ಬಗ್ಗೆ ಖಚಿತ ಮಾಹಿತಿ ನೀಡಬೇಕಾಗಿದೆ. ಕಳೆದ 14 ದಿನಗಳ ಹಿಂದೆ ಇದೇ ದೀಪನಾಥೇಶ್ವರ ದೇವಸ್ಥಾನದ ಅರ್ಚಕರು ಹಾಗೂ 45 ವರ್ಷಗಳ ಹಿಂದೆ ದೀಪ ಹಚ್ಚಿದ ಅಜ್ಜಿ ಶಾರದಾಬಾಯಿ ಅವರ ಸಾಕು ಮಕ್ಕಳಾದ ವೆಂಕಟೇಶ ರಾಯ್ಕರ್…

Read More

ದೆಹಲಿ ರಿಸಲ್ಟ್ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಘೋಷಣೆ – ವಿಜಯೇಂದ್ರ ಭವಿಷ್ಯ ಮೋದಿ ಕೈಯಲ್ಲಿ?

ಬೆಂಗಳೂರು: ದೆಹಲಿ ವಿಧಾನಸಭೆ ರಿಸಲ್ಟ್ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರಿಗೆ ಗ್ರೀನ್ ಸಿಗ್ನಲ್ ಸಿಗಲಿದೆ. ವಿಜಯೇಂದ್ರ ಮುಂದುವರಿಯಬೇಕಾ? ಬೇಡ್ವಾ ಎಂಬುದನ್ನ ಪ್ರಧಾನಿ ನರೇಂದ್ರ ಮೋದಿಯೇ ತೀರ್ಮಾನಿಸಲಿದ್ದಾರೆ ಎನ್ನಲಾಗಿದೆ. ರಾಜ್ಯ ಬಿಜೆಪಿ (BJP) ಚೂರುಚೂರಾಗಿ ಬಣಗಳ ರಗಳೆ ಬಿಜೆಪಿ ಹೈಕಮಾಂಡ್‌ಗೆ ತಲೆನೋವು ತಂದಿದ್ದು, ಗೊಂದಲ ಹೆಚ್ಚಾಗಿರುವ ಕಾರಣ ರಾಷ್ಟ್ರೀಯ ಬಿಜೆಪಿ ನಾಯಕರು ಮೋದಿ ತೀರ್ಮಾನಕ್ಕೆ ಬಿಟ್ಟಿದ್ದಾರೆ ಎಂಬುದು ಬಿಜೆಪಿ ಮೂಲಗಳ ಮಾಹಿತಿ. 

Read More

ಪಿ.ಎಲ್.ಡಿ. ಬ್ಯಾಂಕ ಅಧ್ಯಕ್ಷರಾಗಿ ವೈ.ಪಿ.ಭುಜಂಗಿ ಹಾಗೂ ಉಪಾಧ್ಯಕ್ಷರಾಗಿ ನಬಿಸಾಬ ಮಿಶ್ರಿಕೋಟಿ ಆಯ್ಕೆ

ಮುಂಡಗೋಡ : ಮುಂಡಗೋಡ ಪಿ.ಎಲ್‌.ಡಿ. ಬ್ಯಾಂಕಿನ (ಮುಂಡಗೋಡ ತಾಲೂಕ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ) ನೂತನ ಅಧ್ಯಕ್ಷರಾಗಿ ವೈ.ಪಿ.ಭುಜಂಗಿ ಹಾಗೂ ಉಪಾಧ್ಯಕ್ಷರಾಗಿ ನಬಿಸಾಬ ಮಿಶ್ರಿಕೋಟಿ ಆಯ್ಕೆಯಾಗಿದ್ದಾರೆ.ಚುನಾವಣಾಧಿಕಾರಿಯಾಗಿ ಸುನೀಲ ತೇಲಕರ ಕಾರ್ಯ ನಿರ್ವಹಿಸಿದರು. 

Read More

ಮುಂಡಗೋಡ ಪಿ.ಎಲ್‌.ಡಿ. ಬ್ಯಾಂಕಿನ ಅಧ್ಯಕ್ಷರ, ಉಪಾಧ್ಯಕ್ಷರ ಹಾಗೂ ನಿರ್ದೇಶಕರ ಬೀಳ್ಕೊಡುಗೆ ಸಮಾರಂಭ

ಮುಂಡಗೋಡ : ಮುಂಡಗೋಡ ಪಿ.ಎಲ್‌.ಡಿ. ಬ್ಯಾಂಕಿನ (ಮುಂಡಗೋಡ ತಾಲೂಕ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ) ಅಧ್ಯಕ್ಷರ, ಉಪಾಧ್ಯಕ್ಷರ ಹಾಗೂ ನಿರ್ದೇಶಕರ ಬೀಳ್ಕೊಡುಗೆ ಸಮಾರಂಭ ಬುಧವಾರ ನಡೆಯಿತು.  ಬ್ಯಾಂಕಿನ ಅಧ್ಯಕ್ಷರಾದ ಕೆಂಜೋಡಿ ಗಲಬಿ, ಉಪಾಧ್ಯಕ್ಷರಾದ ಡಿ.ಎಫ್.ಮಡ್ಲಿ ಸೇರಿದಂತೆ ನಿರ್ದೇಶಕರು ಬ್ಯಾಂಕಿನ ಅಭಿವೃದ್ಧಿಗೆ ಸಿಬ್ಬಂದಿಗಳ ಸಹಕಾರವನ್ನು ಶ್ಲಾಘಿಸಿದರು. ಬ್ಯಾಂಕಿನ ಅಭಿವೃದ್ಧಿಗೆ ಕೈಗೊಂಡ ಕಾರ್ಯಗಳ ಬಗ್ಗೆ ಅವರು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಬಸಪ್ಪ ನಾಯ್ಕ, ನಾಗರಾಜ ಅಂಡಗಿ, ಕೆ.ಆರ್.ರಾಮಚಂದ್ರನ್, ತಿಮ್ಮಣ್ಣ ಗೊಟಗೋಡಿ, ಚಂದ್ರಶೇಖರ್ ಗಾಣಿಗೇರ,…

Read More

ಚಳಿಗೆ ತತ್ತರಿಸಿರುವ ಜನತೆಗೆ ಬಿಗ್ ಶಾಕ್ : ಬೇಸಿಗೆಗೂ ಮುನ್ನ ರಾಜ್ಯದಲ್ಲಿ ರಣಬಿಸಿಲು.!

ಬೆಂಗಳೂರು : ತೀವ್ರ ಚಳಿಗೆ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೇಸಿಗೆಗೂ ಮುನ್ನವೇ ರಣಬಿಸಿಲು ಜನರನ್ನು ಸುಡುತ್ತಿದೆ. ತಾಪಮಾನ 30 ಡಿಗ್ರಿ ಸೆ.ಮೀರಿದೆ. ರಾಜ್ಯದಲ್ಲಿ ಬೇಸಿಗೆಗೂ ಮುನ್ನವೇ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಚಳಿಯಿಂದ ನಡುಗುತ್ತಿದ್ದ ಜನರು ಬಿಸಿಲಿನ ಶಾಖಕ್ಕೆ ಹೈರಾಣಾಗಿದ್ದಾರೆ. ಫೆಬ್ರವರಿ ತಿಂಗಳಿನಿಂದಲೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಈ ಬಾರಿ ಬೇಸಿಗೆಯಲ್ಲಿ ಇನ್ನೂ ಹೆಚ್ಚಿನ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಲಬುರಗಿ 36.8, ಬಾಗಲಕೋಟೆ…

Read More