ಬೆಡಸಗಾಂವ ಬಳಿ ಹುಲಿ ತಿರುಗಾಟ
Share Now ಮುಂಡಗೋಡ : ತಾಲೂಕಿನ ಬೆಡಸಗಾಂವ ಊರ ಬಳಿಯೇ ಹುಲಿ ತಿರುಗಾಟ ನಡೆಸಿದೆ. ಹುಲಿಯು ಗ್ರಾಮದ ಬಳಿಯೇ ತಿರುಗಾಡುತ್ತಿರುವ ಬಗ್ಗೆ ಕೆಲವರು ಭಯಭೀತರಾದರೆ ಮತ್ತೆ ಕೆಲವರು ಇದು ಈ ಭಾಗದಲ್ಲಿ `ಕಾಮನ್’ ಎನ್ನುತ್ತಿದ್ದಾರೆ. ಬೆಡಸಗಾಂವ ಗ್ರಾಮಕ್ಕೆ ಹೋಗುವ ದಾರಿ ದಟ್ಟ ಅರಣ್ಯದಿಂದ ಕೂಡಿದ್ದು, ಜನರು ಸೈಕಲ್, ಬೈಕ್ ಮೇಲೆ ಇನ್ನು ಕೆಲವರು ನಡೆದುಕೊಂಡು ಹೋಗುತ್ತಾರೆ. ಆದ್ದರಿಂದ ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.