About us

Spread the love

ನೆಲೆಸಿದವರ ತಾಲೂಕು : ಮುಂಡಗೋಡ

ಉತ್ತರಕನ್ನಡ ಜಿಲ್ಲೆಯ 12 ತಾಲೂಕುಗಳಲ್ಲಿ ಒಂದಾದ ಮುಂಡಗೋಡ ತಾಲೂಕು ಜಿಲ್ಲೆಯ ಪೂರ್ವದ ಅಂಚಿನಲ್ಲಿದೆ.

ಈ ತಾಲೂಕಿನ ಪಶ್ಚಿಮಕ್ಕೆ ಶಿಗ್ಗಾಂವ ಮತ್ತು ಹಾನಗಲ್ ತಾಲೂಕುಗಳು, ಉತ್ತರಕ್ಕೆ ಕಲಘಟಗಿ ತಾಲೂಕು ಹಾಗೂ ದಕ್ಷಿಣಕ್ಕೆ ಶಿರಸಿ ತಾಲೂಕುಗಳು ಇದ್ದು, ಇವು ಮೇರೆಗಳಾಗಿರುತ್ತದೆ.

ಮುಂಡಗೋಡ ತಾಲೂಕು ಸಮುದ್ರ ಮಟ್ಟದಿಂದ 548.78ಮೀಟರ್ ಎತ್ತರದಲ್ಲಿದೆ.

ತಾಲೂಕಿನಲ್ಲಿ ಹಿಂದುಗಳು, ಮುಸ್ಲೀಮರು, ಬೌದ್ಧರು, ಜೈನರು, ಕ್ರೈಸ್ತ ಧರ್ಮದವರು ಸೇರಿದಂತೆ ಎಲ್ಲಾ ಜಾತಿ, ಜನಾಂಗದವರಿದ್ದಾರೆ. ಅದಕ್ಕಾಗಿ ಮುಂಡಗೋಡನ್ನು ನೆಲೆಸಿದವರ ತಾಲೂಕು ಎನ್ನಲಾಗುತ್ತದೆ.

ತಾಲೂಕಿನಲ್ಲಿ ಭತ್ತವನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಆದ್ದರಿಂದ ಮುಂಡಗೋಡ ತಾಲೂಕನ್ನು ಭತ್ತದ ಕಣಜ ಎಂದು ಹೇಳಲಾಗುತ್ತದೆ.

rajnewsline.com

ರಾಜ ನ್ಯೂಸ್ ಲೈನ್ ಡಿಜಿಟಲ್ ಮಾಧ್ಯಮ ಅನಾವರಣ :

ರಾಜ ನ್ಯೂಸ್ ಲೈನ್ ಡಿಜಿಟಲ್ ಮಾಧ್ಯಮವನ್ನು ದಿ. 25-6-2021ರಂದು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ ಅವರು ಮುಂಡಗೋಡದ ಹೊಸ ಟೌನಹಾಲನಲ್ಲಿ ಅನಾವರಣಗೊಳಿಸಿದರು.