ಬೆಂಗಳೂರು: ರಾಜ್ಯ ಸರಕಾರದ ಕೊನೆಯ ಸಚಿವ ಸಂಪುಟ ಸಭೆ ಮಾ.23ರಂದು ನಡೆಯಲಿದೆ. ಈ ಸಂಬಂಧ ಸಮಯ ನಿಗದಿಗೊಳಿಸಲಾಗಿದ್ದು, ಅಂದು ಬೆಳಗ್ಗೆ 11ಕ್ಕೆ ಸಭೆ ನಡೆಯಲಿದೆ. ಮಾ. 27ರಂದು ಚುನಾವಣ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ ಈ ಸಂಪುಟ ಸಭೆಗೆ ಮಹತ್ವ ಲಭಿಸಿದೆ. ಮಾ.25ರಂದು ಹಾವೇರಿಯಲ್ಲಿ ಬಿಜೆಪಿಯ ಮಹಾಸಂಗಮ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
ಮಾ.23ರಂದು ನಡೆಯುವ ಸಭೆಯಲ್ಲಿ ಸರಕಾರ ಮಹತ್ವದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.