33 ವರ್ಷದ ನಂತರ ವಿಜೃಂಭಣೆಯಿಂದ ಜರುಗಿದ ಶ್ರೀ ಬಸವಣ್ಣ ಶ್ರೀ ವೀರಭದ್ರೇಶ್ವರ ರಥೋತ್ಸವ
ಮುಂಡಗೋಡ : ಕಳೆದ 33 ವರ್ಷದ ನಂತರ ಶ್ರೀ ಬಸವಣ್ಣ ಮತ್ತು ಶ್ರೀ ವೀರಭದ್ರೇಶ್ವರ ರಥೋತ್ಸವ ವಿಜೃಂಭಣೆಯಿಂದ ರವಿವಾರ ಜರುಗಿತು. ಶ್ರೀಗಳ ಅಮೃತ ಹಸ್ತದಿಂದ ಹಾಗೂ ಗಣ್ಯರಿಂದ ನೂತನ ರಥದ ಲೋಕಾರ್ಪಣೆಗೊಂಡಿತು. ನಂತರ ವಾದ್ಯ ವೈಭವಗಳೊಂದಿಗೆ ರಥೋತ್ಸವವು ಬನ್ನಿ ಮಹಾಂಕಾಳಿ ದೇವಿಯ ದೇವಸ್ಥಾನದವರೆಗೂ ಭಕ್ತವೃಂದದೊಂದಿಗೆ ಸಾಗಿತು.ಈ ವಿಜೃಂಭಣೆಯ ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.