Raj Newsline

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿ: ಹಿರಿಯ ಯೋಧ ಸಾವು, ಸೇನಾ ಮೇಜರ್ ಸೇರಿ ನಾಲ್ವರಿಗೆ ಗಾಯ

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಸೇನೆ ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್ಕೌಂಟರ್ನಲ್ಲಿ ಒಬ್ಬ ಸೈನಿಕ ಮತ್ತು ಭಯೋತ್ಪಾದಕ ಸಾವನ್ನಪ್ಪಿದ್ದಾರೆ.ನಿಯಂತ್ರಣ ರೇಖೆ (ಎಲ್ಒಸಿ) ಬಳಿಯ ಕುಪ್ವಾರಾದ ಮಚ್ಚಲ್ ಸೆಕ್ಟರ್ನ ಕಮ್ಕಾರಿಯಲ್ಲಿರುವ ಫಾರ್ವರ್ಡ್ ಪೋಸ್ಟ್ನಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು ಸೇನೆ ತಿಳಿಸಿದೆ. ರಕ್ಷಣಾ ಅಧಿಕಾರಿಗಳ ಪ್ರಕಾರ, ಮೇಜರ್ ಶ್ರೇಣಿಯ ಅಧಿಕಾರಿ ಸೇರಿದಂತೆ ಐದು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ ಮತ್ತು ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಗಿದೆ.ಇದು ಬಾರ್ಡರ್ ಆಕ್ಷನ್ ಟೀಮ್ (ಬಿಎಟಿ) ಕ್ರಮ…

Read More

ನಾಟಿ ಮಾಡಲು ಸಸಿ ರೆಡಿ ಮಾಡಿದ ಗದ್ದೆ ಮುಳುಗಡೆ..!

ಮುಂಡಗೋಡ : ನಿರಂತರ ಮಳೆ ಸುರಿಯುತ್ತಿರುವ ಪರಿಣಾಮವಾಗಿ ನಾಟಿ ಮಾಡಲು ಸಸಿ ರೆಡಿ ಮಾಡಿದ ಗದ್ದೆಯು ಸಸಿಗಳ ಸಮೇತ ಮುಳುಗಡೆಯಾಗಿರುವ ಘಟನೆ ತಾಲೂಕಿನ ಚಿಗಳ್ಳಿಯಲ್ಲಿ ನಡೆದಿದೆ.  ಚಿಗಳ್ಳಿಯ ರೈತ ಕಮಲೇಶ್ ಆಲದಕಟ್ಟೆ ಅವರು ನಾಟಿ ಮಾಡಲು ಗದ್ದೆಯಲ್ಲಿ ಸಸಿಗಳನ್ನು ರೆಡಿ ಮಾಡಿದ್ದರು. ನಿರಂತರವಾಗಿ ಸುರಿಯುತ್ತಿರುವ ಕಾರಣ ನಾಟಿ ಮಾಡಲು ಸಸಿ ರೆಡಿ ಮಾಡಿದ ಗದ್ದೆಯೇ ಈಗ ಮುಳುಗಡೆಯಾಗಿ ರೈತ ಕಮಲೇಶ ಆಲದಕಟ್ಟಿ ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅವರ ನೆರವಿಗೆ ತಾಲೂಕ ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಆಗಮಿಸಿ,…

Read More

ದೇವಸ್ಥಾನದ ಮೇಲೆ ಧುಮುಕುವ ಜಲಪಾತ..!

ಕಾರವಾರ : ಜೋಗ ಜಲಪಾತದಿಂದ ಭಟ್ಕಳಕ್ಕೆ  ತೆರಳುವ ಮಾರ್ಗದಲ್ಲಿ ಭೀಮೇಶ್ವರ ಕ್ಷೇತ್ರವಿದೆ.ವನವಾಸದ ಅವಧಿಯಲ್ಲಿ ಭೀಮ ಕಟ್ಟಿಸಿದ ಕ್ಷೇತ್ರ ಎಂಬ ಪ್ರತೀತಿ ಇದೆ.  ಈ ದೇವಸ್ಥಾನ ಶರಾವತಿ ಕೊಳ್ಳದ ಅಚ್ಚರಿ. ದೇವಸ್ಥಾನದ ಮೇಲೆ ಇಲ್ಲಿ ಜಲಪಾತ ಧುಮುಕುತ್ತದೆ. ಜಲಪಾತ ಹಾಗೂ ದೇವಸ್ಥಾನ ಎರಡು ಒಂದೇ ಕಡೆ ಇರುವ ಅಪರೂಪದ ಸ್ಥಳ ಇದಾಗಿದೆ.

Read More

ಹಳ್ಳದಲ್ಲಿ ತೇಲಿ ಬಂದ ಚಿರತೆ ಶವ…

ಮುಂಡಗೋಡ : ದೊಡ್ಡಹಾರವಳ್ಳಿ ಭಾಗದ ಅರಣ್ಯದಲ್ಲಿ  ಚಿರತೆ ಸಾವನಪ್ಪಿದೆ.ಗುರುವಾರ ಅಲ್ಲಿ ಹರಿದಿರುವ ಹಳ್ಳದಲ್ಲಿ ಚಿರತೆ ಶವ ತೇಲಿ ಬಂದಿದೆ. 2.5 ವರ್ಷದ ಗಂಡು ಚಿರತೆ ಇದಾಗಿದೆ ಎಂದು ಅಂದಾಜಿಸಲಾಗಿದೆ. ಚಿರತೆಯ ದೇಹ ಕೊಳೆತಿದ್ದು ದೇಹದ ಮೇಲೆ ಹುಳಗಳಾಗಿವೆ.  ಪಶುವೈದ್ಯರು ಆಗಮಿಸಿ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಹಳ್ಳದ ನೀರಿನ ರಭಸಕ್ಕೆ ಚಿರತೆ ಸಾವನಪ್ಪಿದೆ ಎನ್ನಲಾಗಿದೆ.7-8 ದಿನಗಳ ಹಿಂದೆಯೇ ಈ ಚಿರತೆ ಸಾವನ್ನಪ್ಪಿದ್ದು ಅದರ ದೇಹದ ಮೇಲೆಲ್ಲಾ ಹುಳುಗಳಾಗಿದೆ ಎಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ.ಕೃಷ್ಣಮೂರ್ತಿ ಹೆಗಡೆ ತಿಳಿಸಿದ್ದಾರೆ. 

Read More

ʻಮುಖ್ಯಮಂತ್ರಿ ಕುರ್ಚಿʼ : ಮತ್ತೊಮ್ಮೆ ಮಹತ್ವದ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಮುಖ್ಯಮಂತ್ರಿ ಕುರ್ಚಿ ಕುರಿತು ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಮಹತ್ವದ ಹೇಳಿಕೆ ನೀಡಿದ್ದು, ಅಧಿಕಾರದಲ್ಲಿರುವ ಯಾರೂ ಬೇಕಾದರೂ ಟವೆಲ್ ಹಾಕಬಹುದು. ನಮ್ಮಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹತೆ ಇರುವವರು ತುಂಬಾ ಜನರಿದ್ದಾರೆ ಎಂದು ತಿಳಿಸಿದ್ದಾರೆ. ಮುಡಾ ಹಗರಣ ಬಯಲಾಗಿರುವುದು ಮುಖ್ಯಮಂತ್ರಿಗಳ ಕುರ್ಚಿಗೆ ಟವೆಲ್​​ ಹಾಕಿದವರಿಂದ ಎಂಬ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ‌, ಅಧಿಕಾರದಲ್ಲಿರುವ ಯಾರೂ ಬೇಕಾದರೂ ಸಿಎಂ ಕುರ್ಚಿಗೆ ಟವೆಲ್ ಹಾಕಬಹುದು. ನಮ್ಮಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹತೆ ಇರುವವರು ತುಂಬಾ…

Read More

ನಿರಂತರ ಮಳೆಯಿಂದಾಗಿ ಯಲ್ಲಾಪುರ ರಸ್ತೆಯ ಮೇಲೆ ನೀರು : ಪರದಾಡುತ್ತಿರುವ ಜನರು, ವಾಹನ ಸವಾರರು..!

ಮುಂಡಗೋಡ : ನಿರಂತರ ಮಳೆ ಹಿನ್ನೆಲೆಯಲ್ಲಿ ಮುಂಡಗೋಡ ಪಟ್ಟಣದ ಹೊರವಲಯದಲ್ಲಿರುವ ಅಮ್ಮಾಜಿ ಕೆರೆ ತುಂಬಿ ಹೆಚ್ಚುವರಿ ನೀರು ಯಲ್ಲಾಪುರ ರಸ್ತೆಯಲ್ಲಿ ಹರಿಯುತ್ತಿದೆ. ಯಲ್ಲಾಪುರ ರಸ್ತೆಯ ಮೇಲೆ ನೀರು ಹರಿಯುತ್ತಿರುವ ಕಾರಣ ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಗಿದೆ.  ಪ್ರತಿ ವರ್ಷ ಮಳೆ ಹೆಚ್ಚಾದಾಗಲೆಲ್ಲ ಇದೇ ರೀತಿಯ ನೀರು ಈ ರಸ್ತೆಯ ಮೇಲೆ ಹರಿಯುವುದು ಸಾಮಾನ್ಯವಾಗಿದೆ. ಆದರೆ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶಾಶ್ವತ ಪರಿಹಾರ ಕ್ರಮ ಕೈಗೊಳ್ಳದಿರುವುದು ನಿಜಕ್ಕೂ ದುರ್ದೈವದ ಸಂಗತಿಯಾಗಿದೆ. ಜನಪ್ರತಿನಿಧಿಗಳು ಇದೇ ರಸ್ತೆಯಲ್ಲಿ ಓಡಾಡಿದರೂ…

Read More

ಧರ್ಮ ಜಲಾಶಯ ಭರ್ತಿಯಿಂದಾಗಿ ಮಳಗಿ-ದಾಸನಕೊಪ್ಪ ರಸ್ತೆ ಜಲಾವೃತ

ಮುಂಡಗೋಡ : ತಾಲೂಕಿನ ಮಳಗಿ ಸಮೀಪದ ಧರ್ಮ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಮಳಗಿ-ದಾಸನಕೊಪ್ಪ ರಸ್ತೆ ಜಲಾವೃತವಾಗಿದೆ. ಮಿನಿ ಸೇತುವೆ ಮೇಲೆ ನೀರು ಹರಿಯುತ್ತಿರುವ ಕಾರಣ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಧಾರಾಕಾರ ಮಳೆಯಿಂದಾಗಿ ಧರ್ಮ ಜಲಾಶಯಕ್ಕೆ ನೀರು ಹರಿದು ಬರುತ್ತಿವೆ. ಮಳಗಿ-ದಾಸನಕೊಪ್ಪ ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ಸಾರ್ವಜನಿಕರು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.

Read More

ವಿಜಯ್ ದಿವಸ್ ನ 25ನೇ ವಾರ್ಷಿಕೋತ್ಸವ: ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ತಮ್ಮ ದೇಶದ ಸೇವೆಯಲ್ಲಿ ಅಂತಿಮ ತ್ಯಾಗ ಮಾಡಿದ ಧೈರ್ಯಶಾಲಿಗಳಿಗೆ ಗೌರವ ಸಲ್ಲಿಸಿದರು. ಪಾಕಿಸ್ತಾನದ ವಿರುದ್ಧ ಕಾರ್ಗಿಲ್ ಯುದ್ಧದ ವಿಜಯದ 25 ನೇ ವಾರ್ಷಿಕೋತ್ಸವದ ನೆನಪಿಗಾಗಿ ಅವರು ಸ್ಮಾರಕಕ್ಕೆ ಭೇಟಿ ನೀಡಿದರು. ಜುಲೈ 26, 1999 ರಂದು, ಭಾರತೀಯ ಸೇನೆಯು “ಆಪರೇಷನ್ ವಿಜಯ್” ನ ಯಶಸ್ವಿ ಪರಾಕಾಷ್ಠೆಯನ್ನು ಘೋಷಿಸಿತು, ಲಡಾಖ್ನ ಕಾರ್ಗಿಲ್ನ ಹಿಮಾವೃತ ಎತ್ತರದಲ್ಲಿ ಸುಮಾರು ಮೂರು ತಿಂಗಳ ಸುದೀರ್ಘ ಯುದ್ಧದ ನಂತರ ವಿಜಯವನ್ನು…

Read More

ಶಿರೂರು ಗುಡ್ಡ ಕುಸಿತ: ನದಿ ನೀರಿನಲ್ಲಿ ಲಾರಿಯ ಕ್ಯಾಬಿನ್ ಪತ್ತೆ

ಕಾರವಾರ: ‘ಶಿರೂರು ಗುಡ್ಡ ಕುಸಿತ ದುರಂತದಲ್ಲಿಕಣ್ಮರೆಯಾದ ಕೇರಳದ ಲಾರಿಯ ಕ್ಯಾಬಿನ್ ಗಂಗಾವಳಿ ನದಿಯಲ್ಲಿ ಐದು ಮೀಟರ್ ಆಳದಲ್ಲಿ ಇರುವುದು ಪತ್ತೆಯಾಗಿದೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದರು.ನೊಯ್ದಾದಿಂದ ತರಲಾದ ಡೋನ್ ಆಧಾರಿತ ಶೋಧನ ಯಂತ್ರದ ಮೂಲಕ ತಜ್ಞರು ದಿನವಿಡೀ ಲಾರಿ ಪತ್ತೆ ಕಾರ್ಯ ನಡೆಸಿದರು. ನದಿ ಮೇಲ್ಮನಲ್ಲಿ ಹಾರಾಟ ನಡೆಸಿದ ಯಂತ್ರ ನಾಲ್ಕು ಕಡೆ ಲೋಹದ ವಸ್ತುಗಳಿರುವುದನ್ನು ಪತ್ತೆ ಮಾಡಿತು. ‘ನದಿಯ ದಡದಿಂದ 60 ಮೀಟರ್ ದೂರ ಮತ್ತು 6 ಮೀಟರ್ ಆಳ ಲಾರಿಯ ಕ್ಯಾಬಿನ್ ಇರುವುದು ದೃಢಪಟ್ಟಿದೆ….

Read More

40 ವರ್ಷ ‘ಕಳಂಕ ರಹಿತ’ ರಾಜಕೀಯ ಜೀವನ ನಡೆಸಿದಕ್ಕೆ, ಹೊಟ್ಟೆಕಿಚ್ಚಿನಿಂದ ಮಸಿ ಬಳಿಯಲು ಯತ್ನ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ನಾನು 40 ವರ್ಷಗಳ ಕಾಲ ಕಳಂಕರಹಿತ ರಾಜಕೀಯ ಜೀವನ ನಡೆಸಿದಕ್ಕೆ ನನ್ನ ಮೇಲಿನ ಹೊಟ್ಟೆ ಕಿಚ್ಚಿನಿಂದ ವಿರೋಧ ಪಕ್ಷದವರು ವೈಯಕ್ತಿಕ ದಾಳಿ ಮಾಡಿ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮುಖ್ಯಮ೦ತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ, ಮುಡಾ ನಿವೇಶನ ಹಂಚಿಕೆ ಹಗರಣ ಮತ್ತು ವಾಲ್ಮೀಕಿ ನಿಗಮ ಹಗರಣದ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ವಿಪಕ್ಷಗಳು ಘೋಷಣೆಗಳನ್ನು ಕೂಗಿದವು. ಗದ್ದಲದ ನಡುವೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು 40 ವರ್ಷಗಳ ಕಾಲ…

Read More