ಸಚಿವ ಹೆಬ್ಬಾರ ಹಾಡಿದ “ಯಾರೇ ಕೂಗಾಡಲಿ…” ಹಾಡಿಗೆ ಫುಲ್ ಫಿದಾ ಆದ ಜನಸ್ತೋಮ

Spread the love

ಮುಂಡಗೋಡ : ಇಂದು ನಡೆದ ಮುಂಡಗೋಡ ತಾಲೂಕಾ ಬಿ.ಜೆ.ಪಿ. ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ ಅವರು ಹಾಡಿದ ಸಂಪತ್ತಿಗೆ ಸವಾಲ್ ಚಿತ್ರದ “ಯಾರೇ ಕೂಗಾಡಲಿ…” ಎಂಬ ಹಾಡಿಗೆ ಸೇರಿದ ಜನಸ್ತೋಮ ಫುಲ್ ಫಿದಾ ಆದರು. ಸಚಿವ ಶಿವರಾಮ ಹೆಬ್ಬಾರ ಅವರು ಹಾಡಿದ ಹಾಡು ಈ ರೀತಿ ಇತ್ತು.

“ಯಾರೇ ಕೂಗಾಡಲಿ, ಊರೇ ಹೋರಾಡಲಿ.

ಎಮ್ಮೇ ನಿನಗೆ ಸಾಟಿ ಇಲ್ಲ

ನನ್ನ ನೆಮ್ಮದಿಗೆ ಭಂಗವಿಲ್ಲ.

ಮುಂಡಗೋಡ ಜನರು ಜೊತೆಗಿರುವ ತನಕ

ಯಾವುದಕ್ಕೂ ಹೆದರಿಕೆನೇ ಇಲ್ಲ.”

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹಾಡನ್ನು ಕೇಳಿದ ಬಿ.ಜೆ.ಪಿ. ಮುಖಂಡರೂ ಸೇರಿದಂತೆ ಬಿ.ಜೆ.ಪಿ. ಕಾರ್ಯಕರ್ತರು, ಜನರು ಭಾರೀ ಚಪ್ಪಾಳೆ, ಶಿಳ್ಳೆ ಹೊಡೆದು ಖುಷಿಪಟ್ಟರು.