ಜೈನ ಮುನಿಯ ಹತ್ಯೆ ಖಂಡಿಸಿ ವಿವಿಧ ಸಂಘಟನೆಯಿಂದ ಖಂಡನೆ, ಮೆರವಣಿಗೆ, ಮನವಿ ಅರ್ಪಣೆ

Share Now

ಮುಂಡಗೋಡ : ಚಿಕ್ಕೋಡಿ ತಾಲೂಕಿನ ಜೈನ ಮುನಿಯ ಹತ್ಯೆಯನ್ನು ಖಂಡಿಸಿ ಮನೆಯಲ್ಲಿ ಮಹಾಮನೆ ಸತ್ಸಂಗ ಹಾಗೂ ವಿವಿದ ಸಂಘಟನೆಗಳ ಆಶ್ರಯದಲ್ಲಿ ಇಂದು ಪ್ರತಿಭಟನಾ ಮೆರವಣಿಗೆ ನಡೆಸಿ, ಮುಂಡಗೋಡ ತಹಶೀಲದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಜೈನ ಮನಿಯ ಹತ್ಯೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಇದನ್ನು ಮುಂಡಗೋಡದ ವಿವಿಧ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತದೆ. ತಪ್ಪಿತಸ್ಥರನ್ನು ಉಗ್ರ ಶಿಕ್ಷೆಗೆ ಗುರಿಪಡಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ, ಸಾಧನಾ ಸಂಸ್ಥೆಯ ಮುಖ್ಯಸ್ಥರಾದ ಡಾ.ಇಸಾಬೆಲ್ಲಾದಾಸ್, ತಾಲೂಕಾ ಕ.ಸಾ.ಪ. ಅಧ್ಯಕ್ಷರಾದ ವಸಂತ ಕೊಣಸಾಲಿ, ಜೈನ ಸಮಾಜದವರು, ಮನೆಯಲ್ಲಿ ಮಹಾಮನೆ ಸತ್ಸಂಗದ ಪ್ರಮುಖರು, ವಿವಿಧ ಸಂಘಟನೆಯ ಮುಖ್ಯಸ್ಥರು ಇದ್ದರು.