ಮುಂಡಗೋಡ : ರೋಟರಿ ಕ್ಲಬ್ ಮುಂಡಗೋಡ ನೂತನ ಅಧ್ಯಕ್ಷರಾಗಿ ಶಾಜಿ ಥಾಮಸ್ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಬೈಜು ವಿ.ಜೆ., ಖಜಾಂಚಿಯಾಗಿ ವಸಂತ ಕೊಣಸಾಲಿ ಆಯ್ಕೆಯಾಗಿದ್ದಾರೆ.
ಪತ್ರಿಕಾಗೋಷ್ಟಿ : ತಮ್ಮ ಅವಧಿಯಲ್ಲಿ ರೋಟರಿ ಕ್ಲಬ್ ನಿಂದ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಎಲ್ಲರೂ ಸಹಕಾರ ನೀಡಬೇಕೆಂದು ರೋಟರಿ ಕ್ಲಬ್ ನೂತನ ಅಧ್ಯಕ್ಷರಾದ ಶಾಜಿ ಥಾಮಸ್ ಇಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಪತ್ರಕರ್ತರು ಸಮಾಜದ ಓರೆಕೋರೆಗಳನ್ನು ತಿದ್ದುವವರು, ಪತ್ರಕರ್ತರು ಸೈನಿಕರಿದ್ದಂತೆ ಹಾಗೂ ಕೊರೊನಾ ವಾರಿಯರ್ಸ ಎಂದು ಅವರು ನುಡಿದರು. ಇದೇ ಸಂದರ್ಭದಲ್ಲಿ ಪತ್ರಕರ್ತರಿಗೆ ಕೊರೊನಾ ವಾರಿಯರ್ಸ ಎಂದು ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯದರ್ಶಿಯಾದ ಬೈಜು ವಿ.ಜೆ., ಖಜಾಂಚಿಯಾದ ವಸಂತ ಕೊಣಸಾಲಿ, ಎಸ್.ಕೆ.ಬೋರಕರ, ಚೇತನ ಕಲಾಲ, ಉಮೇಶ ಉಮ್ಮಚಗಿ ಇದ್ದರು.
ರೋಟರಿ ಕ್ಲಬ್ ಮುಂಡಗೋಡ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿ.18ರಂದು ರವಿವಾರ ಸಂಜೆ 6ಗಂಟೆಗೆ ಟ್ರಿನಿಟಿ ಹಾಲ್ ನಲ್ಲಿ ನಡೆಯಲಿದೆ.