ಮುಂಡಗೋಡ : ಸಾಲಗಾಂವ ಗ್ರಾಮದ ಶ್ರೀ ಬಾಣಂತಿದೇವಿ ಜಾತ್ರಾ ಮಹೋತ್ಸವವು ನಾಳೆ ದಿ.14ರಿಂದ ದಿ.16 ರವರೆಗೆ ನಡೆಯಲಿದೆ.
ನಾಳೆ ದಿ. 14 ರಂದು ಬೆಳಗಿನಜಾವ 5ಗಂಟೆಗೆ ಪ್ರಥಮ ಪೂಜೆ ಮತ್ತು ಅಭಿಷೇಕ ನಂತರ 6:00ಗೆ ಪ್ರಣಮ ಪಂಚಾಕ್ಷರಿ ಮಂತ್ರ ಘೋಷಣೆಯೊಂದಿಗೆ ಸಪ್ತಾಹ ಪ್ರಾರಂಭಗೊಳ್ಳಲಿದೆ.
ದಿ.15ರಂದು ಬೆಳಿಗ್ಗೆ 6-30 ಗಂಟೆಗೆ ಪ್ರಣಮ ಪಂಚಾಕ್ಷರಿ ಸಪ್ತಾಹವು ಮಂಗಲಗೊಳ್ಳುವುದು. ಬೆಳಿಗ್ಗೆ 9-30 ಗಂಟೆಗೆ ದೇವಿಗೆ ಮಹಾಪೂಜೆ, ಉಡಿ ತುಂಬುವ, ಹಣ್ಣು ಕಾಯಿ ಸಮರ್ಪಣೆ ನಂತರ ಗ್ರಾಮದ ಎಲ್ಲಾ ದೇವರುಗಳಿಗೆ ಹಣ್ಣುಕಾಯಿ ಸಮರ್ಪಣೆ ಕಾರ್ಯಕ್ರಮಗಳು, ಡೊಳ್ಳಿನ ಮಜಲು, ಭಜನೆಗಳೊಂದಿಗೆ ಅತೀ ವಿಜೃಂಭಣೆಯಿಂದ ಜರುಗಲಿದೆ.
ಸಾಯಂಕಾಲ 4ಗಂಟೆಗೆ ಶ್ರೀದೇವಿಯ ಪಲ್ಲಕ್ಕಿ ಉತ್ಸವ ಮತ್ತು ತೆಪ್ಪೋತ್ಸವ ಸಂಜೆ 5 ಗಂಟೆಗೆ ಜ್ಯೋತಿ ಪೂಜೆಯೊಂದಿಗೆ ಕೆರೆಯಲ್ಲಿ ಬಿಡುವುದು.
ಸಂಜೆ 7 ಗಂಟೆಯಿಂದ ಡೊಳ್ಳಿನ ಮಜಲು ವಾದ್ಯ ವೈಭವಗಳೊಂದಿಗೆ ಜರುಗಲಿದೆ. ರಾತ್ರಿ 9-30 ಗಂಟೆಯಿಂದ ಭಾರೀ ಸವಾಲ ಜವಾಬ ಭಜನಾ ಸ್ಪರ್ಧೆ ನಡೆಯಲಿದೆ.
ಜಾತ್ರೆಯಲ್ಲಿ ಗುಳಗುಳಿ(ಜೂಜು) ಆಟ ಬೇಡ :
ಜಾತ್ರೆಯಲ್ಲಿ ಗುಳಗುಳಿ(ಜೂಜು) ಆಟ ಬೇಡ ಎಂದು ಹಲವಾರು ಭಕ್ತರು ವಿನಂತಿಸಿದ್ದಾರೆ.
ಎಲ್ಲರಿಗೂ ಸನ್ಮಂಗಳ ಉಂಟು ಮಾಡುವ ಹಾಗೂ ಬೇಡಿದ ಭಕ್ತರಿಗೆ ವರ ನೀಡುವ ಶಕ್ತಿ ದೇವತೆಯಾಗಿ ಪ್ರಸಿದ್ಧಿ ಪಡೆದಿರುವ ಶ್ರೀ ಬಾಣಂತಿದೇವಿ ಜಾತ್ರಾ ಮಹೋತ್ಸವದಲ್ಲಿ ಯಾವುದೇ ಕಾರಣಕ್ಕೂ ಗುಳಗುಳಿ(ಜೂಜು) ಆಟ ಬೇಡವೆಂಬುದು ಹಲವಾರು ಭಕ್ತರ ಬೇಡಿಕೆಯಾಗಿದೆ.