ಅಂದಲಗಿ : ಹಾಳು ಬಾವಿಯಲ್ಲಿ ಬಿದ್ದ ಜಿಂಕೆಯ ರಕ್ಷಣೆ

Share Now

ಮುಂಡಗೋಡ : ತಾಲೂಕಿನ ಅಂದಲಗಿ ಗ್ರಾಮದಲ್ಲಿ ಹಾಳು ಬಾವಿಯಲ್ಲಿ ಜಿಂಕೆಯೊಂದು ಆಯತಪ್ಪಿ ಬಿದ್ದಾಗ ಅದನ್ನು ಅಗ್ನಿಶಾಮಕ ದಳದವರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ರಕ್ಷಿಸಿದ ಘಟನೆ ಇಂದು ಸಂಭವಿಸಿದೆ.
ಅಂದಲಗಿ ಗ್ರಾಮದಲ್ಲಿ ಈಶ್ವರ ದೇವಸ್ಥಾನದ 57 ಅಡಿ ಆಳದ ಹಾಳುಬಾವಿಯಲ್ಲಿ ಜಿಂಕೆಯು ಆಯತಪ್ಪಿ ಬಿದ್ದಾಗ  ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಯವರಾದ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ರಾಜೇಶ್  ರಾಣೆ, ಮಹಾಬಲೇಶ್ವರ ಶಿವನಗುಡಿ, ಸಂತೋಷ್ ಪಾಟೀಲ್,  ಹರೀಶ್ ಪಟಗಾರ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯವರ ಸಹಾಯದಿಂದ ಜಿಂಕೆಯನ್ನು ರಕ್ಷಿಸಿ ಬಾವಿಯಿಂದ ಹೊರ ತೆಗೆದು ರಕ್ಷಿಸಿದರು.