ಸೂರಜ್‌ ರೇವಣ್ಣ ಪ್ರಕರಣವನ್ನು ʻCIDʼ ಗೆ ನೀಡುತ್ತೇವೆ : ಗೃಹ ಸಚಿವ ಡಾ.ಜಿ. ಪರಮೇಶ್ವರ್

Spread the love

ಬೆಂಗಳೂರು : ಜೆಡಿಎಸ್‌ ಎಂಎಲ್‌ ಸಿ ಸೂರಜ್‌ ರೇವಣ್ಣ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ ಪ್ರಕರಣವನ್ನು ಸಿಐಡಿಗೆ ನೀಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಸೂರಜ್‌ ರೇವಣ್ಣ ಪ್ರಕರಣ ಗಂಭೀರವಾಗಿದ್ದು, ದೂರು ದಾಖಲಾದ ಬಳಿಕ ಸೂರಜ್‌ ರೇವಣ್ಣರನ್ನು ಬಂಧಿಸಲಾಗಿದೆ. ರಿಟರ್ನ್‌ ದೂರು ನೀಡಿದ ಬಗ್ಗೆಯೂ ತನಿಖೆ ಆಗಲಿದೆ, ಕಾನೂನಿನ ಪ್ರಕಾರ ಪೊಲೀಸರು ತನಿಖೆ ನಡೆಸಲಿದ್ದಾರೆ. ಪ್ರಕರಣವನ್ನು ಸಿಐಡಿಗೆ ನೀಡುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.