
ಮುಂಡಗೋಡ : ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ತಾಲೂಕಿನ ಶಿಕ್ಷಕಿ ಅಶ್ವಿನಿ ಹೆಗಡೆ, ಶಿಕ್ಷಕ ಸಿದ್ದಲಿಂಗಪ್ಪ ಹೊಸ್ಮನಿ ಹಾಗೂ ಶಿಕ್ಷಕಿ ಪೂರ್ಣಿಮಾ ಗೌಡ ಅವರಿಗೆ ಲಭಿಸಿದೆ.

ಶಿರಸಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಮಟ್ಟದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಮುಂಡಗೋಡ ತಾಲೂಕಿನ ಕಲಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಅಶ್ವಿನಿ ಹೆಗಡೆ, ನ್ಯಾಸರ್ಗಿಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿದ್ದಲಿಂಗಪ್ಪ ಹೊಸ್ಮನಿ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಮಳಗಿಯ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕಿ ಪೂರ್ಣಿಮಾ ಗೌಡರಿಗೆ ದೊರಕಿದೆ.

ಸೆಪ್ಟೆಂಬರ್ 5ರಂದು ಶಿರಸಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶಿಕ್ಷಕ ದಿನಾಚರಣೆಯಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವದೆಂದು ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.