ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್ : ಸಿಎಂ ಸಿದ್ದರಾಮಯ್ಯ ಪತ್ನಿ ಕೇಳಿದ್ದು 13, ಮುಡಾ ಕೊಟ್ಟಿದ್ದು 14 ಸೈಟ್

Spread the love

ಮೈಸೂರು : ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಿಎಂ ಸಿದ್ದರಾಮಯ್ಯ ಅವರು ಮುಡಾಗೆ ಕೇಳಿದ್ದು 13 ಸೈಟ್ ಆದರೆ ಮುಡಾ ಕೊಟ್ಟದ್ದು 14 ಸೈಟ್ ಎನ್ನುವ ಮಾಹಿತಿ ಬಹಿರಂಗವಾಗಿದೆ.

ಹೌದು, ಸಿಎಂ ಸಿದ್ದರಾಮಯ್ಯ ಖಾಸಗಿ ಆಪ್ತ ಸಹಾಯಕ ಎಸ್.ಜಿ. ದಿನೇಶ್ ಕುಮಾರ್ ಅವರು ಪಾರ್ವತಿ ಹೆಸರಿನಲ್ಲಿ 13 ಸೈಟ್ ಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಮುಡಾ 14 ಸೈಟ್ ಕೊಟ್ಟಿರುವುದು ಬಹಿರಂಗವಾಗಿದೆ.

13-01-2022 ರಂದು ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಬರೆದ ಪತ್ರದಲ್ಲಿ ತಮಗೆ 13 ಸೈಟ್ ಗಳನ್ನು ನೋಂದಣಿ ಮಾಡಿಸಿಕೊಡುವಂತೆ ಮುಡಾಗೆ ಪತ್ರ ಬರೆದಿದ್ದರು. ಆದರೆ ಮುಡಾ 14 ಸೈಟ್ ನೋಂದಣಿ ಮಾಡಿಸಿಕೊಟ್ಟಿರುವುದು ಪತ್ರದಲ್ಲಿ ಬಹಿರಂಗವಗಿದೆ.