ಮುಂಡಗೋಡ : ಕೊಳಚೆ ಪ್ರದೇಶ ಘೋಷಣೆಯನ್ನು ಡಿನೊಟಿಫೀಕೇಶನ್ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

Spread the love

ಮುಂಡಗೋಡ : ಮುಂಡಗೋಡ ಸ.ನಂ. 186
ಗಾಂಧಿನಗರದ 25 ಎಕರೆ ಕೊಳಚೆ ಪ್ರದೇಶ ಅಲ್ಲದಿದ್ದರೂ ಸುಳ್ಳು ಮತ್ತು ತಪ್ಪು ಮಾಹಿತಿ ಕೊಟ್ಟು ಕೊಳಚೆ ಪ್ರದೇಶ ಎಂದು ಘೋಷಣೆ ಮಾಡಿರುವ ಅಂತಿಮ ಅಧಿಸೂಚನೆ ತಿದ್ದುಪಡಿ ಮಾಡುವ ಬಗ್ಗೆ ಬುಧವಾರ ಮುಂಡಗೋಡ ಗಾಂಧಿನಗರ ಅಭಿವೃದ್ಧಿ ಸಮಿತಿಯವರು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು. 

ಗಾಂಧಿನಗರದ 25 ಎಕರೆ ಕೊಳಚೆ ಪ್ರದೇಶ ಎಂದು ಅನಧಿಕೃತವಾಗಿ ಘೋಷಣೆ ಮಾಡಿರುವ ಅಂತಿಮ ಅಧಿಸೂಚನೆ ತಿದ್ದುಪಡಿ ಮಾಡಿ ಎಂದು ಈ ಹಿಂದೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರಿಗೆ ದಿ.21-9-2022ರಂದು, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ದಿ.29-10-2022ರಂದು, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರಿಗೆ ದಿ.2-8-2023ರಂದು ದಾಖಲೆಗಳ ಸಮೇತ ದೂರು ಕೊಟ್ಟಿರುತ್ತೇವೆ.
ಆದರೆ ಇದುವರೆಗೂ ಯಾವುದೇ ರೀತಿಯ ಕ್ರಮವಾಗಿಲ್ಲ. 

ತಾವು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಸುಳ್ಳು ಮತ್ತು ತಪ್ಪು ಮಾಹಿತಿ ಕೊಟ್ಟು ಘೋಷಣೆ ಮಾಡಿರುವ ಅಂತಿಮ ಅಧಿಸೂಚನೆ ಡಿನೋಟಿಫಿಕೇಷನ್ ಮಾಡಿಸಿ ನಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಮುಂಡಗೋಡ ಗಾಂಧಿನಗರ ಅಭಿವೃದ್ಧಿ ಸಮಿತಿಯ ವೆಂಕಟೇಶ ಶಿರಾಲಿ, ಪಿ.ಡಿ.ನಾಯ್ಕ, ಎನ್.ಡಿ.ಕಿತ್ತೂರ, ವಿ.ಎಸ್.ವಿರಕ್ತಮಠ ಮುಂತಾದವರಿದ್ದರು.