ಮುಂಡಗೋಡ : ಮೋಟರ್ ಸೈಕಲ್ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಮುಂಡಗೋಡ ಗಾಂಧಿನಗರದ ಶಂಕ್ರವ್ವ ಕುರುಬರ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.
ಘಟನೆ ವಿವರ : ಕಳೆದ ದಿನ ಮೂರರಂದು ಮೋಟರ್ ಸೈಕಲ್ ಸವಾರನಾದ ರಾಮಚಂದ್ರಪ್ಪ ಮಥೂರ (ಚಿತ್ರದುರ್ಗ) ಈತನು ತನ್ನ ಮೋಟರ್ ಸೈಕಲ್ ಅನ್ನು ಅತಿ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಮುಂಡಗೋಡದ ಹುಬ್ಬಳ್ಳಿ ರಸ್ತೆಯಲ್ಲಿರುವ ಟ್ರಿನಿಟಿ ಹಾಲ್ ಎದುರುಗಡೆ ನಡೆದುಕೊಂಡು ಹೋಗುತ್ತಿದ್ದ ಶಂಕ್ರವ್ವ ಕುರುಬರ (52) ಇವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮವಾಗಿ ತಲೆಗೆ ತೀವ್ರ ಸ್ವರೂಪದ ಗಾಯ ಉಂಟಾಗಿತ್ತು. ಜೊತೆಗೆ ಅಲ್ಲಲ್ಲಿ ಗಾಯವಾಗಿತ್ತು.
ತೀವ್ರ ಗಾಯಗೊಂಡಿದ್ದ ಶಂಕ್ರವ್ವ ಕುರುಬರ ಅವರನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶಂಕ್ರವ್ವ ಕುರುಬರ ಮೃತಪಟ್ಟಿದ್ದಾರೆ.