ಮುಂಡಗೋಡ : ಮುಂಡಗೋಡ ತಾಲೂಕ ವಕೀಲರ ಸಂಘದ ಹಿರಿಯ ವಕೀಲರಾದ ಬಿ.ಎಫ್.ಪೂಜಾರ್ ಅವರ ಮೇಲೆ ಉಪನೋಂದಣಾಧಿಕಾರಿಗಳ ಅನುಚಿತ ವರ್ತನೆ ಹಾಗೂ ಅಗೌರವವಾಗಿ ನಡೆದುಕೊಂಡ ಬಗ್ಗೆ ವಕೀಲರ ಸಂಘದವರು ಇಂದು ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಅರ್ಪಿಸಿದರು.
ಉಪನೋಂದಣಾಧಿಕಾರಿಗಳ ನಡವಳಿಕೆಯನ್ನು ಖಂಡಿಸಿ ಸಂಘದ ಎಲ್ಲಾ ಸದಸ್ಯರು ಈ ಕುರಿತು ಸವಿಸ್ತಾರವಾಗಿ ಸಂಘದ ಸದಸ್ಯರ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿ ವರ್ತನೆಯನ್ನು ಖಂಡಿಸಿ ತೀರ್ಮಾನ ಕೈಗೊಳ್ಳಲಾಯಿತು. ಉಪನೋಂದಣಾಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.