ಬೆಳಗಾವಿ : ಬೆಳಗಾವಿಯ ಸುವರ್ಣ ಸೌಧದಲ್ಲಿ ಸದನ ನಡಿಯೋ ವೇಳೆ ಬಿಜೆಪಿ ಎಂಎಲ್ಸಿ ಸಿಟಿ ರವಿಯವರು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಆಕ್ಷೇಪರಹ ಪದ ಬಳಸಿದರು ಈ ವಿಚಾರವಾಗಿ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿಯವರು ದೇಶದಲ್ಲಿ ಇಂತಹ ಘಟನೆ ಹೊಸದೇನಲ್ಲ ಎಂದು ಹೇಳಿಕೆ ನೀಡಿದ್ದು ಇದೀಗ ಭಾರಿ ಸಂಚಲನ ಮೂಡಿಸಿದೆ.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಘಟನೆ ಆಗಿದ್ದು ಆಗಿಹೋಗಿದೆ ಮುಂದುವರಿಸೋದ್ರಲ್ಲಿ ಅರ್ಥವಿಲ್ಲ.ದೇಶದಲ್ಲಿ ಇಂಥ ಘಟನೆಗಳು ಹೊಸದೇನಲ್ಲ, ಸಂಸತ್ತು, ವಿಧಾನಸಭೆಯಲ್ಲಿ ಬಹಳಷ್ಟು ನಡೆದಿವೆ. ಘಟನೆಗೆ ಕ್ಷಮೆ ಕೇಳಿದ ಬಳಿಕ ಮುಗಿದು ಹೋಗಿವೆ. ಈಗಲೂ ಅದೇ ರೀತಿ ಮುಗಿಸೋದು ಒಳ್ಳೆಯದು. ಸಾರ್ವಜನಿಕವಾಗಿ ಈ ಪ್ರಕರಣ ಮುಂದುವರೆಸುವುದು ಅನವಶ್ಯಕ ಎಂದರು.
ನನ್ನನ್ನು ಪೊಲೀಸರು ಹತ್ಯೆ ಮಾಡಲು ಯತ್ನಿಸಿದ್ದರು ಎಂದು ಸಿಟಿ ರವಿ ಆರೋಪಿಸಿರುವ ಕುರಿತಾಗಿ, ಸಿಟಿ ರವಿ ಓರ್ವ ಶಾಸಕ ಅವರನ್ನು ಹೇಗೆ ಎನ್ಕೌಂಟರ್ ಮಾಡಲಾಗುತ್ತೆ? ತೊಂದರೆ ಕೊಡಬೇಕೆಂದು ಠಾಣೆಯಿಂದ ಠಾಣೆಗೆ ಸುತ್ತಾಡಿಸಿಲ್ಲ ಮೊದಲೆಲ್ಲ ಬಿಜೆಪಿ ಕಾರ್ಯಕರ್ತರು ಧರಣಿ ಶುರುಮಾಡಿದರು ಈ ಕಾರಣಕ್ಕೆ ಠಾಣೆಯಿಂದ ಠಾಣೆಗೆ ಸಿಟಿ ರವಿ ಕರೆದೋಯ್ದಿದ್ದಾರೆ ಎಂದು ತಿಳಿಸಿದರು.
ಸಿಟಿ ರವಿ ಅವರೇ ನಾನು ಆ ಪದ ಬಳಸಿಲ್ಲ ಎಂದು ಹೇಳಿದ್ದಾರೆ. ಅವರೇ ಹಾಗೆ ಹೇಳಿದ ಮೇಲೆ ಈ ಪ್ರಕರಣ ಮುಂದುವರಿಸುವುದರಲ್ಲಿ ಯಾವುದೇ ಅರ್ಥವಿಲ್ಲ.ಹಲ್ಲೆಗೆ ಯತ್ನ ನಡೆದಾಗ ಸಿ.ಟಿ ರವಿಯನ್ನು ಮಾರ್ಷಲ್ ಗಳು ರಕ್ಷಣೆ ಮಾಡಿದ್ದಾರೆ. ಸೌಧದ ಒಳಗೆ ಅನೇಕ ಕಾರ್ಯಕರ್ತರು ಇರ್ತಾರೆ, ಇವರೇ ಎಂದು ಹೇಳುವುದು ಕಷ್ಟ. ದೂರು ದಾಖಲಾದ ಬಳಿಕವೇ ಸಿ.ಟಿ ರವಿ ಬಂಧನವಾಗಿದೆ. ಹಾಗಾದರೆ ಹಲ್ಲೆ ಒಬ್ಬ ವಿಧಾನ ಪರಿಷತ್ ಸದಸ್ಯನಿಗೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಬಿಡುಗಡೆಗೊಳಿಸಿದ್ದೇಕೆ ಎಂಬ ಪ್ರಶ್ನೆಗೆ ಉತ್ತರವಿಲ್ಲ ಎಂದರು.