ಬಾಚಣಕಿಯಲ್ಲಿ ಒಕ್ಕೂಟದ ಮಾಸಿಕ ಸಭೆ, ಎಫ್.ಎಂ.ಎಚ್.ಡಬ್ಲ್ಯು. ಕಾರ್ಯಕ್ರಮ, ಉಚಿತ ದಂತ ಚಿಕಿತ್ಸಾ ಶಿಬಿರ

Spread the love

ಮುಂಡಗೋಡ : ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪಂಚಾಯತ ಉತ್ತರ ಕನ್ನಡ, ತಾಲೂಕ ಪಂಚಾಯತ ಮುಂಡಗೋಡ, ಗ್ರಾಮ ಪಂಚಾಯತ ಬಾಚಣಿಕಿ, ಪ್ರಕೃತಿ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟ ಬಾಚಣಕಿ ಇವರ ಸಂಯುಕ್ತ ಆಶ್ರಯದಲ್ಲಿ ಒಕ್ಕೂಟದ ಮಾಸಿಕ ಸಭೆ, ಎಫ್.ಎಂ.ಎಚ್.ಡಬ್ಲ್ಯು. ಕಾರ್ಯಕ್ರಮ ಹಾಗೂ ಉಚಿತ ದಂತ ಚಿಕಿತ್ಸಾ ಶಿಬಿರವು ಸೋಮವಾರ ಬಾಚಣಕಿ ಗ್ರಾಮ ಪಂಚಾಯತದ ಎನ್.ಆರ್.ಎಲ್.ಎಂ. ವರ್ಕ್ ಶೆಡ್ ನಲ್ಲಿ ನಡೆಯಿತು.  

ಈ ಕಾರ್ಯಕ್ರಮವನ್ನು ಗ್ರಾ.ಪಂ.ಅಧ್ಯಕ್ಷೆ ಫಕ್ಕೀರವ್ವ ಪಾಟೀಲ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸ್ವರೂಪರಾಣಿ ಪಾಟೀಲ್ ಮಾತನಾಡುತ್ತಾ, ಉಚಿತ ದಂತ ಚಿಕಿತ್ಸೆ ಶಿಬಿರದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತೆ ಕರೆ ನೀಡಿದರು.
ತಾ.ಪಂ.ಎನ್.ಆರ್.ಎಲ್.ಎಂ.ನ ಮೇಲ್ವಿಚಾರಕರಾದ ಶ್ಯಾಮಲಾ ನಾಯ್ಕ ಮಾತನಾಡುತ್ತಾ, ಸಾಮಾಜಿಕ ಭದ್ರತಾ ಯೋಜನೆಯಾದ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಕುರಿತು ಮಾಹಿತಿ ಹೇಳಿ, ಕಡ್ಡಾಯವಾಗಿ ಪ್ರತಿಯೊಬ್ಬರು ಈ ವಿಮೆಯನ್ನು ಮಾಡಿಸುವಂತೆ ತಿಳಿಸಿದರು ಹಾಗೂ ಸಂಜೀವಿನಿ ಯೋಜನೆ ಕುರಿತು ಸವಿಸ್ತಾರವಾಗಿ ಮಾಹಿತಿ ಹೇಳಿದರು.  ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ಅವರು ಟಿ. ಬಿ., ಏಡ್ಸ್  ತಡೆಗಟ್ಟುವ ಕುರಿತು ಮಾಹಿತಿ ಹೇಳಿದರು. 

ಈ ಸಂದರ್ಭದಲ್ಲಿ ದಂತ ವೈದ್ಯರಾದ ಡಾ.ಲಕ್ಷ್ಮಿ ದೊಡ್ಮನಿ, ಪ್ರಕೃತಿ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟದ ಅಧ್ಯಕ್ಷೆ ಸುಜಾತಾ ಹೊತಗೊಣ್ಣನವರ್, ಎನ್.ಆರ್.ಎಲ್.ಎಂ.ನ ತಾಲೂಕ ವ್ಯವಸ್ಥಾಪಕರು ಕೃಷಿಯ ಸಂದೇಶ ಹೆಗಡೆ,  ಚಂದ್ರಶೇಖರ, ಶ್ರೀಕಾಂತ್, ಗಜಾನನ, ಪ್ರಕೃತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಆಶಾ ಕಾರ್ಯಕರ್ತೆಯರು ಇದ್ದರು.
ಜಿ.ಪಿ.ಎಲ್.ಎಫ್.ನ ಮಾಜಿ ಅಧ್ಯಕ್ಷೆ ಅನಸೂಯಾ ಸದಾನಂದ ಅವರ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 

ಆರಂಭದಲ್ಲಿ ರೇಖಾ ಗೊಣೆನವರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ವೇತಾ ಕಠಾರಿ ವಂದಿಸಿದರು.
ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಟಿ.ವೈ.ದಾಸನಕೊಪ್ಪ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳಲ್ಲಿ     ಮಹಿಳೆಯರ ಆರೋಗ್ಯ, ಸಬಲೀಕರಣ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಮಾಡಿ ಎಲ್ಲರ ಮೆಚ್ಚುಗೆ ಗಳಿಸುತ್ತಿರುವುದು ಕಂಡುಬರುತ್ತಿದೆ.