ಹೊನ್ನಾವರ : ಉತ್ತರಕನ್ನಡ ಜಿಲ್ಲಾಪತ್ರಕರ್ತರ ಸಂಘದ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭ

Share Now

ಹೊನ್ನಾವರ : ಉತ್ತರಕನ್ನಡ ಜಿಲ್ಲಾಪತ್ರಕರ್ತರ ಸಂಘದ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭ ಕಾರ್ಯಕ್ರಮವು ಹೊನ್ನಾವರದ ಮೂಡಗಣಪತಿ ದೇವಸ್ಥಾನದ ಸಭಾಭವನದ ದಿ.ವೆಂಕಟರಮಣ ಶಾಸ್ತ್ರಿ ಸೂರಿ ಸಭಾಭವನದಲ್ಲಿ ನಡೆಯಿತು. 

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,
ಸಮಾಜದ ಸುಧಾರಕರಾಗಿ ಪತ್ರಕರ್ತರು ಕಾರ್ಯ ನಿರ್ವಹಿಸಬೇಕು. ಮಾಧ್ಯಮದ ಮೂಲಕ ಸಂದೇಶವನ್ನು ಜನರಿಗೆ ತಲಿಪಿಸುವ ಕಾರ್ಯ ಮಾಡಿದೆ. ಅಂದಿನಿಂದ ಇಂದಿನವರೆಗೂ ಉತ್ತಮಕಾರ್ಯ ಮಾಡಿದವರಿಗೆ ಗೌರವ ಎಂದಿಗೂ ಇದೆ.
ಉತ್ತರ ಕನ್ನಡ ಜಿಲ್ಲೆಯ ಪತ್ರಕರ್ತರು ಉತ್ತಮವಾಗಿ ನಿಷ್ಢೆಯಿಂದ ಕಾರ್ಯಮಾಡುವಂತವರ ಮೂಲಕ ಇನ್ನೂ ಹೆಚ್ಚಿನ ಉತ್ತಮ ಕಾರ್ಯವಾಗಲಿ ಎಂದರು. 

ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ, ಪತ್ರಕರ್ತರು ನಾವು ಹೇಳುವುದಕ್ಕಿಂತ ಮುಂಚೆ ಹೇಳಿರುತ್ತೀರಿ. ಅಷ್ಟು ಮುಂದುವರಿದಿದ್ದೀರಿ. ನಮ್ಮ ಜಿಲ್ಲೆಯ ಪತ್ರಕರ್ತರು ಸ್ವಾರ್ಥ ಇಲ್ಲದೇ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಸಂಯುಕ್ತ ಕರ್ನಾಟಕ ಪತ್ರಿಕೆಯ ಮುಖ್ಯಕಾರ್ಯನಿರ್ವಾಹಕ ಸಂಪಾದಕರೂ, ಲೋಕ ಶಿಕ್ಷಣ ಟ್ರಸ್ಟ ಸಿಇಒ ಮೋಹನ ಹೆಗಡೆ ಅವರಿಗೆ ಕೆ.ಶಾಮರಾವ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕೆ.ಯು.ಡಬ್ಲ್ಯು.ಜೆ.ಎ. ಶಿವಾನಂದ ತಗಡೂರ, ಜಿಲ್ಲಾ ಪತ್ರಿಕಾ ಮಂಡಳಿ ಶಿರಸಿ ಅಧ್ಯಕ್ಷರಾದ ಜಿ.ಸುಬ್ರಾಯ ಭಟ್ ಬಕ್ಕಳ, ಹಿರಿಯ ಪತ್ರಕರ್ತರಾದ ಟಿ.ಎಂ.ಸುಬ್ಬರಾಯ, ಜಿ.ಯು.ಭಟ್ ಹೊನ್ನಾವರ ಮುಂತಾದವರಿದ್ದರು.