
62. ಮೀನುಗಾರ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ವ್ಯವಹಾರ ವಿಸ್ತರಣೆಗೆ ಸಹಾಯ ಮಾಡಲು, ಬಡ್ಡಿರಹಿತ ಸಾಲದ ಮಿತಿಯನ್ನು ರೂ. 50,000 ರಿಂದ ರೂ.3,00,000ಕ್ಕೆ ಹೆಚ್ಚಿಸಲಾಗಿದೆ. ಇಲ್ಲಿಯವರೆಗೆ 2863 ಮೀನುಗಾರ ಮಹಿಳೆಯರು ರೂ.2533.50 ಲಕ್ಷ ಸಾಲವನ್ನು ಪಡೆದಿದ್ದಾರೆ.
63. ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಕರಾವಳಿ ಮೀನುಗಾರರಿಗೆ ಮತ್ಸ್ಯ ಆಶಾಕಿರಣ ಯೋಜನೆ ಅಡಿಯಲ್ಲಿ ನೀಡಲಾಗುವ ಪರಿಹಾರ ಮೊತ್ತದಲ್ಲಿ ರಾಜ್ಯದ ಪಾಲನ್ನು ರೂ.1,500 ರಿಂದ ರೂ.3,000 ಕ್ಕೆ ಹೆಚ್ಚಿಸಲಾಗಿದೆ.
64. ರೈತಸಿರಿ ಯೋಜನೆಯಡಿ, ಬೆಳೆ ಸಮೀಕ್ಷೆಯ ಆಧಾರದ ಮೇಲೆ, ಧಾನ್ಯ ಬೆಳೆಗಾರರಿಗೆ ನೇರ ನಗದು ವರ್ಗಾವಣೆ (DBT) ಮೂಲಕ ಪ್ರತಿ ಹೆಕ್ಟೇರ್‌ಗೆ ರೂ.10,000 ದರದಲ್ಲಿ ಗರಿಷ್ಠ 2.00 ಹೆಕ್ಟೇರ್‌ಗಳವರೆಗೆ ಮತ್ತು ಧಾನ್ಯಗಳ ಸಂಸ್ಕರಣೆ, ಮೌಲ್ಯವರ್ಧನೆ, ವರ್ಗೀಕರಣ, ಪ್ಯಾಕಿಂಗ್ ಮತ್ತು ಬ್ರ‍್ಯಾಂಡಿಂಗ್‌ಗಾಗಿ ಯಂತ್ರೋಪಕರಣಗಳಿಗೆ 50% ಅಥವಾ ಗರಿಷ್ಠ ರೂ.10.00 ಲಕ್ಷಗಳವರೆಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ.
65. ಪೌಷ್ಟಿಕ ಆಹಾರ ಯೋಜನೆಯಡಿಯಲ್ಲಿ, ಅರಣ್ಯ ಮತ್ತು ಅರಣ್ಯ ಅಂಚಿನಲ್ಲಿ ವಾಸಿಸುವ 12 ಪರಿಶಿಷ್ಟ ಪಂಗಡ ಸಮುದಾಯಗಳ 47,859 ಕುಟುಂಬಗಳಿಗೆ ರೂ.120 ಕೋಟಿ ವೆಚ್ಚದಲ್ಲಿ ಪೌಷ್ಟಿಕ ಆಹಾರವನ್ನು ವಿತರಿಸಲಾಗುತ್ತಿದೆ.
66. ನಮ್ಮ ಗಣರಾಜ್ಯದ ನೈಜ ಶಕ್ತಿಯು ವೈವಿಧ್ಯತೆಯಲ್ಲಿ ಏಕತೆ, ಪ್ರಜಾಪ್ರಭುತ್ವ ಸಂಸ್ಥೆಗಳ ಚಲನಶೀಲತೆ ಮತ್ತು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳ ಬದ್ಧತೆಯಲ್ಲಿದೆ. ಭಾರತ ಸಂವಿಧಾನದ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ಮತ್ತು ಅವರ ನಾಯಕತ್ವದಲ್ಲಿ ಕರಡು ಸಮಿತಿಯ ಪ್ರತಿಯೊಬ್ಬ ಸದಸ್ಯರು ಈ ದೇಶಕ್ಕೆ ತಮ್ಮ ಅಭೂತಪೂರ್ವ ಕೊಡುಗೆಯನ್ನು ನೀಡಿದ್ದಾರೆ. 76ನೇ ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ಅವರನ್ನು ಸ್ಮರಿಸುತ್ತಾ, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಮತ್ತು ದೇಶದ ಸೇವೆ ಮತ್ತು ಸುಧಾರಣೆಗೆ ಸಿದ್ಧರಾಗೋಣ.
67. ರಾಷ್ಟ್ರದ ಏಕತೆ, ಸಮಾನತೆ ಮತ್ತು ಸಮೃದ್ಧಿಯನ್ನು ಸಾಧಿಸುವಲ್ಲಿ ಪ್ರಜಾಪ್ರಭುತ್ವದ ಆದರ್ಶಗಳು ನಮ್ಮ ಹಾದಿಗೆ ಮಾರ್ಗದರ್ಶನ ನೀಡುತ್ತಲೇ ಇರಲಿ, ದೇಶಭಕ್ತಿ ಮತ್ತು ಏಕತೆಯ ಮನೋಭಾವವು ರಾಷ್ಟ್ರದ ಒಳಿತಿಗೆ ಕೊಡುಗೆ ನೀಡಲಿ, ಸುಭದ್ರ, ಸೌಹಾರ್ಧ ಹಾಗೂ ಸಮೃದ್ಧ ಕರ್ನಾಟಕ ಹಾಗೂ ಭಾರತವನ್ನು ನಿರ್ಮಿಸಲು ಸಂವಿಧಾನದ ಶಕ್ತಿಯನ್ನು ಬಳಸಿಕೊಂಡು ಮುನ್ನಡೆಯೋಣ. ಮಾದರಿ ಪ್ರಜಾಪ್ರಭುತ್ವವನ್ನು ಇನ್ನಷ್ಟು ಶಕ್ತಗೊಳಿಸೋಣ.
ಧನ್ಯವಾದಗಳು.
ಜೈ ಹಿಂದ್ ! ಜೈ ಕರ್ನಾಟಕ !