ಮುಂಡಗೋಡ : 4 ಪ.ಪೂ. ಕಾಲೇಜಿನ PUC ದ್ವಿತೀಯ ವರ್ಷದ ಫಲಿತಾಂಶದ ಡಿಟೇಲ್ಸ ಇಲ್ಲಿದೆ…

Share Now

ಮುಂಡಗೋಡ : ತಾಲೂಕಿನ 4 ಪದವಿ ಪೂರ್ವ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶದ ಡಿಟೇಲ್ಸ ಇಲ್ಲಿದೆ. 

ಮುಂಡಗೋಡದ ಸರ್ಕಾರಿ ಪದವಿ ಪೂರ್ವ ಕಾಲೇಜ : ಮುಂಡಗೋಡದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಶೇ.74.21ರಷ್ಟಾಗಿದೆ.
ಕಲಾ ವಿಭಾಗದಲ್ಲಿ 116, ವಾಣಿಜ್ಯ ವಿಭಾಗದಲ್ಲಿ 44, ವಿಜ್ಞಾನ ವಿಭಾಗದಲ್ಲಿ 30 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ ಕಲಾ ವಿಭಾಗದಲ್ಲಿ 89, ವಾಣಿಜ್ಯ ವಿಭಾಗದಲ್ಲಿ 32 ಮತ್ತು ವಿಜ್ಞಾನ ವಿಭಾಗದಲ್ಲಿ 20 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ ನಿವೇದಿತಾ ದೊಡ್ಡಂಗಡಿ ಶೇ. 92.50 (555 ಅಂಕ) ಫಲಿತಾಂಶ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಠಕ್ಕು ಯಮಕರ್ ಶೇ. 91.67 (550 ಅಂಕ) ಪಡೆದು ಪ್ರಥಮ ಸ್ಥಾನ ಗಳಿಸಿದರೆ, ವಿಜ್ಞಾನ ವಿಭಾಗದಲ್ಲಿ ಈಶ್ವರ್ ಗೌಡ ಶೇ. 89.50 (537 ಅಂಕ) ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆಂದು ಕಾಲೇಜಿನ ಪ್ರಿನ್ಸಿಪಾಲರಾದ ಗುಡ್ಡಪ್ಪ ಕಡೆಮನಿ ತಿಳಿಸಿದ್ದಾರೆ.

ಮಳಗಿ ಸರಕಾರಿ ಪ.ಪೂ.ಕಾಲೇಜ :
ತಾಲೂಕಿನ ಮಳಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಶೇ. 80.65 ರಷ್ಟಾಗಿದೆ.
ಕಲಾ ವಿಭಾಗದಲ್ಲಿ 76, ವಿಜ್ಞಾನ ವಿಭಾಗದಲ್ಲಿ 60, ವಾಣಿಜ್ಯ ವಿಭಾಗದಲ್ಲಿ 50 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ ಕಲಾ ವಿಭಾಗದಲ್ಲಿ 60, ವಿಜ್ಞಾನಿ ವಿಭಾಗದಲ್ಲಿ 49, ವಾಣಿಜ್ಯ ವಿಭಾಗದಲ್ಲಿ 41 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ ವೀಣಾ ನಾಯ್ಕ ಶೇ.94.17
( 565 ಅಂಕ) ಫಲಿತಾಂಶ ಪಡೆದು ಪ್ರಥಮ ಸ್ಥಾನ
ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ನಾಜಿಮಾ ಕೂರ್ಲಿ ಶೇ.90.50 (549 ಅಂಕ) ಫಲಿತಾಂಶ ಗಳಿಸಿ
ಪ್ರಥಮ ಸ್ಥಾನ ಪಡೆದಿದ್ದಾಳೆ. ವಿಜ್ಞಾನ ವಿಭಾಗದಲ್ಲಿ
ಧನ್ಯ ರಾಯ್ಕರ ಶೇ. 89.5 (537 ಅಂಕ) ಫಲಿತಾಂಶ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆಂದು ಕಾಲೇಜಿನ ಪ್ರಿನ್ಸಿಪಾಲರಾದ ಗಣೇಶ ಹೆಗಡೆ ತಿಳಿಸಿದ್ದಾರೆ.

ಲೊಯೋಲಾ ಸಂಯುಕ್ತ ಪ.ಪೂ. ಕಾಲೇಜ :
ಲೊಯೋಲಾ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಶೇ.87.18ರಷ್ಟಾಗಿದೆ.
ಕಲಾ ವಿಭಾಗದಲ್ಲಿ 69, ವಾಣಿಜ್ಯ ವಿಭಾಗದಲ್ಲಿ 80 ಮತ್ತು ವಿಜ್ಞಾನ ವಿಭಾಗದಲ್ಲಿ 85 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ ಕಲಾ ವಿಭಾಗದಲ್ಲಿ 54 ವಾಣಿಜ್ಯ ವಿಭಾಗದಲ್ಲಿ 75 ಮತ್ತು ವಿಜ್ಞಾನ ವಿಭಾಗದಲ್ಲಿ 75 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ ವರ್ಷಾ ಪಾಟೀಲ್ ಶೇ.90.67 (544 ಅಂಕ) ಫಲಿತಾಂಶದೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ವಾಣಿಜ್ಯ ವಿಭಾಗದಲ್ಲಿ ವಿನಯ ಹೋತ್ನಲ್ಲಿ 88 (528 ಅಂಕ) ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಹಾಗೂ ವಿಜ್ಞಾನ ವಿಭಾಗದಲ್ಲಿ ಹನುಮಂತ ಗೋಣೆಪ್ಪನವರ ಶೇ.94.17 (565 ಅಂಕ) ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಿನ್ಸಿಪಾಲರಾದ ಮಾದೇವ ರಾಠೋಡ ತಿಳಿಸಿದ್ದಾರೆ.

ಮೊರಾರ್ಜಿ ವಸತಿ ಕಾಲೇಜ :
ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಿಜ್ಞಾನ ವಸತಿ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಶೇಕಡ 85.71ರಷ್ಟಾಗಿದೆ.
ಪರೀಕ್ಷೆಗೆ ಒಟ್ಟು 63 ವಿದ್ಯಾರ್ಥಿಗಳಲ್ಲಿ 54 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ದೇವಪ್ಪ ಶಿವಾಟವನಕರ್ ಶೇ.91.83 (551 ಅಂಕ) ಫಲಿತಾಂಶದೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಅಶ್ವಿನಿ ಬೆಸ್ತರ ಶೇ.87.50 (525 ಅಂಕ) ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ ಮತ್ತು ಪ್ರತಿಭಾ ನಾಯ್ಕ ಶೇ. 85.67 (514 ಅಂಕ) ಫಲಿತಾಂಶದೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಿನ್ಸಿಪಾಲರಾದ ಮಂಜುನಾಥ ಮರಿತಮ್ಮಣ್ಣನವರ್ ತಿಳಿಸಿದ್ದಾರೆ.