
ಮುಂಡಗೋಡ : ಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ದೇವಸ್ಥಾನ ಟ್ರಸ್ಟ್ ನ್ಯಾಸರ್ಗಿ, ಮುಂಡಗೋಡ ತಾಲೂಕ ನಾಮಧಾರಿ (ಆರ್ಯ ಈಡಿಗ) ಬಿಲ್ಲವ ಸಾಮಾಜಿಕ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಮುಂಡಗೋಡ ತಾಲೂಕಿನ ನ್ಯಾಸರ್ಗಿ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರುಗಳ 10ನೇ ವರ್ಷದ ವರ್ಧಂತಿ ಉತ್ಸವವು ದಿ.12 ಮತ್ತು ದಿ.13ರಂದು ಜರುಗಲಿದೆ.

ದಿ.12ರಂದು ಸಾಯಂಕಾಲ ಶುದ್ಧಿ ಹೋಮ, ಬಿಂಬ ಶುದ್ದಿ, ವಾಸ್ತು ರಾಕ್ಷೋಜ್ಞ ಹೋಮ, ಮೃತ್ಯುಂಗಿ ಹೋಮ ಇತ್ಯಾದಿ ಜರುಗಲಿದೆ. ದಿ.13ರಂದು ಬೆಳಗ್ಗೆ ಶುಭ ಮುಹೂರ್ತದಲ್ಲಿ ಗಣ ಹೋಮ, ನವಗ್ರಹ ಪೂಜೆ, ಕಲಾಭಿವೃದ್ಧಿ ಹೋಮ ಮತ್ತು 12 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ.
ದಿ.13ರಂದು ಮಧ್ಯಾಹ್ನ 3ಗಂಟೆಗೆ ನ್ಯಾಸರ್ಗಿಯ ಶ್ರೀ ನಾರಾಯಣಗುರು ಸಭಾಭವನದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಶ್ರೀ ನಾರಾಯಣ ಗುರು ಟ್ರಸ್ಟ್ ಅಧ್ಯಕ್ಷರಾದ ಸಿ.ಕೆ.ಅಶೋಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕರಾದ ಶಿವರಾಮ ಹೆಬ್ಬಾರ್ ಅಧ್ಯಕ್ಷತೆ ಉದ್ಘಾಟಿಸಲಿದ್ದಾರೆ.
ಶಾಸಕರಾದ ಭೀಮಣ್ಣ ನಾಯ್ಕ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ವಿ.ಎಸ್.ಪಾಟೀಲ, ಕೆಡಿಸಿಸಿ ಬ್ಯಾಂಕ ನಿರ್ದೇಶಕರಾದ ಎಲ್.ಟಿ.ಪಾಟೀಲ, ಜಿ.ಪಂ. ಮಾಜಿ ಸದಸ್ಯರಾದ ರವಿಗೌಡ ಪಾಟೀಲ, ತಾಲೂಕಾ ನಾಮಧಾರಿ (ಈಡಿಗ) ಸಾಮಾಜಿಕ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಎಚ್.ಎಂ.ನಾಯ್ಕ, ನಿವೃತ್ತ ಡಿ.ಎಫ್.ಒ. ಯು.ಡಿ.ನಾಯ್ಕ, ಸ್ಕೋಡವೆಸ್ ಸಂಸ್ಥೆ ಮುಖ್ಯಸ್ಥರಾದ ಡಾ.ವೆಂಕಟೇಶ ನಾಯ್ಕ, ಪತ್ರಕರ್ತರಾದ ಪಿ.ಎಸ್.ಸದಾನಂದ, ಶ್ರೀ ಬಸವೇಶ್ವರ ಸೊಸೈಟಿ ಸಿಇಒ ಸಿ.ಕೆ.ಮಧುಸೂದನ್, ಉದ್ಯಮಿ ಕೃಷ್ಣ ಪೂಜಾರಿ, ಉದ್ಯಮಿ ರಾಘವೇಂದ್ರ ನಾಯ್ಕ, ಉದ್ಯಮಿ ಪಿ.ಜಿ.ತಂಗಚ್ಚನ್, ಶ್ರೀ ಬಸವೇಶ್ವರ ಸೊಸೈಟಿ ಉಪಾಧ್ಯಕ್ಷರಾದ ಜಗದೀಶ ಕುರುಬರ, ಸಾಮಾಜಿಕ ಕಾರ್ಯಕರ್ತರಾದ ಆರ್.ಜೆ.ಬೆಳ್ಳೆನವರ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ನಾಗರಾಜ ಉಪಾಧ್ಯಾಯ, ಗ್ರಾ.ಪಂ. ಸದಸ್ಯೆ ಶೋಭಾ ರಾಜನ್, ಗ್ರಾ.ಪಂ. ಸದಸ್ಯೆ ಮಂಜುಳಾ ತಳವಾರ, ಉದ್ಯಮಿ ಮುರುಳೀಧರ, ಉದ್ಯಮಿ ಕೃಷ್ಣವೇಲು, ಉದ್ಯಮಿ ನಾರಾಯಣ ಉಪ್ಪುಂದ, ರಾಧಾ ನಾಯರ ಆಗಮಿಸಲಿದ್ದಾರೆ ಎಂದು ಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ದೇವಸ್ಥಾನ ಟ್ರಸ್ಟ್ ನ್ಯಾಸರ್ಗಿ ಉಪಾಧ್ಯಕ್ಷರಾದ ಎನ್.ವಿ.ಉದಯನ್, ಕಾರ್ಯದರ್ಶಿ ಪ್ರೇಮಲತಾ ವಾಸುದೇವನ್ ತಿಳಿಸಿದ್ದಾರೆ.