
ಮುಂಡಗೋಡ : ತಾಲೂಕಿನ ಗುಂಜಾವತಿ, ಮೈನಳ್ಳಿ ಭಾಗದಲ್ಲಿ ಇತ್ತೀಚೆಗೆ ಬಿದ್ದ ಮಳೆಗಾಳಿಯಿಂದ ಅರಣ್ಯದಲ್ಲಿ ಕೋಟ್ಯಾಂತರರೂ. ಮೌಲ್ಯದ ಮರಗಳು ಬಿದ್ದಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಉತ್ಪನ್ನ ಆಗುವಂತೆ ಸದ್ಬಳಕೆ ಮಾಡಿಕೊಳ್ಳಿ ಎಂದು ಶಾಸಕರಾದ ಶಿವರಾಮ ಹೆಬ್ಬಾರ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಗಳವಾರ ಅವರು ತಾ.ಪಂ. ಸಭಾಭವನದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅರಣ್ಯ ಬೆಳೆಸಬೇಕಾದ ಜವಾಬ್ದಾರಿ ನಮಗೆ, ನಿಮಗೆ ಹಾಗೂ ಸಾರ್ವಜನಿಕರಿಗೂ ಇದೆ. ನಮ್ಮ ಜನರ ಭಾವನೆಗಳಿಗೆ ಧಕ್ಕೆ ಬರದಂತೆ ನೋಡಿಕೊಳ್ಳಲು ನಿಮ್ಮ ಸಿಬ್ಬಂದಿಗೆ ಹೇಳಿ ಎಂದು ಶಾಸಕರಾದ ಶಿವರಾಮ ಹೆಬ್ಬಾರ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಎಷ್ಟು ಸಾಧ್ಯವೂ ಅಷ್ಟು ನಿಮ್ಮಲ್ಲಿ ಚಿಕಿತ್ಸೆ ನೀಡಿ. ಅನಿವಾರ್ಯ ಇದ್ದಾಗ… ಫೆಸಿಲಿಟಿ ಇಲ್ಲದಾಗ ಮಾತ್ರ ಹೆಚ್ಚಿನ ಚಿಕಿತ್ಸೆಗೆ ಬೇರೆ ಕಡೆ ಕಳಿಸಿ ಎಂದು ಶಾಸಕರಾದ ಶಿವರಾಮ ಹೆಬ್ಬಾರ್ ಅವರು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಟಿ.ವೈ.ದಾಸನಕೊಪ್ಪ, ತಹಶೀಲದಾರ ಶಂಕರ ಗೌಡಿ, ಕೆ.ಡಿ.ಪಿ. ನಾಮ ನಿರ್ದೇಶಿತ ಸದಸ್ಯರಾದ ಎಚ್.ಎಂ.ನಾಯ್ಕ, ಕೃಷ್ಣ ಹಿರೇಹಳ್ಳಿ, ಶಾರದಾ ರಾಠೋಡ, ರಾಜಶೇಖರ ಹಿರೇಮಠ, ಎಂ.ಎನ್.ದುಂಡಶಿ, ಗೋಪಾಲ ಪಾಟೀಲ ಇದ್ದರು. ಆರಂಭದಲ್ಲಿ ಪಿಡಿಒ ಶ್ರೀನಿವಾಸ ಮರಾಠೆ ಸ್ವಾಗತಿಸಿದರು.