ಭಾರತದ ವಿರುದ್ಧ ಸುಳ್ಳು ಆರೋಪ – ಪಾಕ್‌ಗೆ ಹಿಗ್ಗಾಮುಗ್ಗಾ ಜಾಡಿಸಿದ ವಿಶ್ವಸಂಸ್ಥೆ

Share Now

ನ್ಯೂಯಾರ್ಕ್: ಪಾಕಿಸ್ತಾನದ ಕೋರಿಕೆಯ ಮೇರೆಗೆ ಕರೆಯಲಾಗಿದ್ದ ವಿಶ್ವಸಂಸ್ಥೆಯ (United Nations) ಭದ್ರತಾ ಮಂಡಳಿಯ ರಹಸ್ಯ ಸಭೆಯಲ್ಲಿ ಪಾಕ್ ಬೆವರಿಳಿಸಿಕೊಂಡಿದೆ. ಭಾರತದ ವಿರುದ್ಧ ಸುಳ್ಳು ಆರೋಪ ಮಾಡಿದ್ದ ಪಾಕಿಸ್ತಾನಕ್ಕೆ (Pakistan) ವಿಶ್ವಸಂಸ್ಥೆ ಹಿಗ್ಗಾಮುಗ್ಗಾ ಜಾಡಿಸಿದೆ.

ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಪಾಕ್ ಮನವಿಯ ಮೇರೆಗೆ ತುರ್ತು ಸಭೆ ನಡೆಯಿತು. ಸಭೆಯಲ್ಲಿ ಪಾಕಿಸ್ತಾನ ಪಹಲ್ಗಾಮ್ ವಿಚಾರವನ್ನು ಬದಿಗೆ ಸರಿಸಿ ಕಾಶ್ಮೀರದ ವಿಚಾರವನ್ನು ಮುಂದಿಟ್ಟು ಭಾರತ ಮಿಲಿಟರಿ ಪಡೆಯನ್ನು ಸಿದ್ಧವಾಗಿಟ್ಟುಕೊಂಡಿರುವ ಬಗ್ಗೆ ಸಿಂಪಥಿ ಗಿಟ್ಟಿಸಲು ಪ್ಲ್ಯಾನ್‌ ಮಾಡಿತ್ತು. ಆದರೆ ಪಾಕ್ ನಾಟಕಕ್ಕೆ ವಿಶ್ವಸಂಸ್ಥೆ ಸೊಪ್ಪು ಹಾಕದೇ ಛೀಮಾರಿ ಹಾಕಿದೆ.

ಇದೇ ವೇಳೆ ವಿಶ್ವಸಂಸ್ಥೆ ಪಾಕಿಸ್ತಾನಕ್ಕೆ ಪಹಲ್ಗಾಮ್ ಹತ್ಯಾಕಾಂಡದ ಹಿಂದೆ ಲಷ್ಕರ್ ನಂಟಿನ ಬಗ್ಗೆಯೂ ಪ್ರಸ್ತಾಪಿಸಿ ಹಾಗೂ ಬಹಿರಂಗವಾಗಿ ನ್ಯೂಕ್ಲಿಯರ್ ಬಾಂಬ್ ದಾಳಿಯ ಹೇಳಿಕೆ, ಕ್ಷಿಪಣಿ ಪ್ರಯೋಗದ ಬಗ್ಗೆ ಪ್ರಶ್ನಿಸಿ ಬೆವರಿಳಿಸಿದೆ.

ಸಭೆಯಲ್ಲಿ ಭಯೋತ್ಪಾದಕ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಕೆಲವು ಸದಸ್ಯರು ನಿರ್ದಿಷ್ಟವಾಗಿ ತಮ್ಮ ಧಾರ್ಮಿಕ ನಂಬಿಕೆಯ ಆಧಾರದ ಮೇಲೆ ಪ್ರವಾಸಿಗರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿ ಟೀಕಿಸಿತು. ಕೊನೆಗೆ ಭಾರತದೊಂದಿಗೆ ನೀವೇ ಮಾತುಕತೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸೂಚಿಸಲಾಯಿತು.