
ಮುಂಡಗೋಡ : ತಾಲೂಕಿನ ಬಾಚಣಕಿ ಗ್ರಾಮದ ಇತಿಹಾಸ ಪ್ರಸಿದ್ಧ 12ನೇ ಶತಮಾನದ ಯೋಗಿ ಶ್ರೀಗುರು ಅನ್ನದಾನೇಶ್ವರರ ಜಾತ್ರಾ ಮಹೋತ್ಸವ ಗುರುವಾರ ಸಂಭ್ರಮದಿಂದ ನೆರವೇರಿತು.

ಇಂದು ಮುಂಜಾನೆ ಶ್ರೀಗುರು ಅನ್ನದಾನೇಶ್ವರ ಅವರಿಗೆ ಮಹಾ ರುದ್ರಾಭಿಷೇಕ ಹಾಗೂ ಅನೇಕ ಪೂಜಾ ಕಾರ್ಯಕ್ರಮಗಳು ಮತ್ತು ಮಹಾ ಅನ್ನಸಂತರ್ಪಣೆ ನಂತರ ಸಂಜೆ 4 ಗಂಟೆಗೆ ಭವ್ಯ ರಥೋತ್ಸವ ನೆರವೇರಿತು.
ಈ ಸಂದರ್ಭದಲ್ಲಿ ಊರಿನ ಹಿರಿಯರು, ಸದ್ಭಕ್ತರು, ತಾಯಂದಿರು ಹಾಗೂ ಸುತ್ತಮುತ್ತ ಗ್ರಾಮದ ಸದ್ಭಕ್ತರು ಕೂಡ ಭಾಗಿಯಾಗಿದ್ದರು.