ಕಾರವಾರದ ತೀಳ್ಮಾತಿ ಬೀಚಿನಲ್ಲಿ ಪತ್ತೆಯಾದ ಅಪರೂಪದ ‘ಗಿಡುಗ ಆಮೆ’ (ಹಾಕ್ಸ್ ಬಿಲ್) ಶವ ಪತ್ತೆ

Spread the love

ಕಾರವಾರ: ಸಮುದ್ರ ಆಮೆಗಳಲ್ಲಿ ಅತೀ ಚಿಕ್ಕ ಆಮೆಗಳ ಪ್ರಬೇಧ ಎಂದುಹೇಳಲಾಗುವ ಹಾಕ್ಸ್ ಬಿಲ್ ಜಾತಿಯ ,ಸ್ಥಳೀಯ ಭಾಷೆಯಲ್ಲಿ “ಗಿಡುಗ ಆಮೆ” ಎಂದು ಕರೆಯಲ್ಪಡುವ ಅಪರೂಪದ ಆಮೆ ಕಳೆಬರಹ ಪಶ್ಚಿಮ ಕರಾವಳಿಯಲ್ಲಿ ಮೊದಲಬಾರಿ ಕಾರವಾರದ ತೀಳ್ಮಾತಿ ಬೀಚ್ ಬಳಿ ಪತ್ತೆಯಾಗಿದೆ.

ಕಳೆಬರಹವನ್ನು ಕಡಲಜೀವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಪಂಚಮಿಯವರು ಪತ್ತೆ ಮಾಡಿದ್ದಾರೆ.
ಸಮುದ್ರ ಆಮೆಗಳಲ್ಲೇ ಗಾತ್ರದಲ್ಲಿ ಅತೀ ಚಿಕ್ಕದಾಗಿದ್ದು , ಇದರ ಮುಖವು ಗಿಡಗನ ಮುಖದಂತೆ ಹೋಲುತ್ತದೆ. ದೇಹದ ಮೇಲೆ ಹುಲಿಯ ದೇಹದಂತೆ ಪಟ್ಟೆಗಳಿರುತ್ತವೆ ಹಾಗೂ ಕಾಲುಗಳಲ್ಲಿ ಎರಡು ಉಗುರುಗಳಿವೆ. ನೋಡಲು ತುಂಬಾ ಸುಂದರವಾಗಿ ಕಾಣುವ ಈ ಆಮೆ ಹೆಚ್ಚಾಗಿ ಫೆಸಿಪಿಕ್ ಮತ್ತು ಅಟ್ಲಾಂಟಿಕಾ ಸಾಗರಗಳಲ್ಲಿ ಆಳವಿಲ್ಲದ ಕಡೆ ಹವಳದ ದಿಬ್ಬಗಳಲ್ಲಿ ಕಾಣುತ್ತವೆ ಎಂದು ಹೇಳಲಾಗಿದೆ.

4000 ಕಿಲೋಮೀಟರ್ ಕ್ಕಿಂತ ಹೆಚ್ಚು ದೂರ ಕ್ರಮಿಸುವ ಸಾಮರ್ಥ್ಯ ಇರುವ 100 ಕಿಲೋ ತೂಕದ ವರೆಗೂ ಇರುತ್ತದೆ. ಆಮೆ 2ರಿಂದ 3 ವರ್ಷಗಳಿಗೊಮ್ಮೆ ಮೊಟ್ಟೆಯಿಡುತ್ತದೆ. ಬಂಗಾಳ ಕೊಲ್ಲಿ ಸೇರಿದಂತೆ ಇತರ ಭಾಗದಲ್ಲಿ ಕಂಡುಬರುವ “ಆಲಿವ್ ರಿಟ್ಟಿ” ಜಾತಿಯ ಆಮೆಗಳಂತೆ ಬಹುತೇಕ ಇದರ ಜೀವನಕ್ರಮ ಹೋಲುತ್ತದೆ.

ದೀರ್ಘ ಕಾಲದ ವರೆಗೆ  ಬದುಕುವ ಆಮೆಗಳು  ಸತ್ತು ಕಡಲತೀರಗಳಿಗೆ ಬರತೊಡಗಿದೆ. ಹೀಗಾಗಿ ಇವುಗಳ ಸಾವಿನ ಬಗ್ಗೆ ಹೆಚ್ಚು ಅಧ್ಯಯನದ ಅವಶ್ಯಕತೆ ಇದೆ ಎನ್ನುತ್ತಾರೆ ಪರಿಸರ ಪ್ರೇಮಿಗಳು.