
ಮುಂಡಗೋಡ : ಇಂದು ಮುಂಡಗೋಡ ನಗರದ ಅಂಬೇಡ್ಕರ್ ಓಣಿಯಲ್ಲಿರುವ ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ ಮೂರ್ತಿ ಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಸಂವಿಧಾನ ಅರ್ಪಣಾ ದಿನವನ್ನು ಆಚರಿಸಲಾಯಿತು.
ಭಾರತ ಸಂವಿಧಾನವು ಜಗತ್ತಿನಲ್ಲಿನ ಅತಿ ದೊಡ್ಡ ಸಂವಿಧಾನ ಎಂದು ಹೇಳಲಾಗುತ್ತದೆ. ಇದು ಸದ್ಯ 448 ವಿಧಿಗಳು 12 ಪರಿಚ್ಛೇದಗಳು 105 ತಿದ್ದುಪಡಿಗಳನ್ನು ಹೊಂದಿದೆ. ಇಂತಹ ಬೃಹತ್ ಸಂವಿಧಾನವು ಜನೆವರಿ 26, 1950 ರಂದು ಇದನ್ನು ಜಾರಿಗೆ ತರಲಾಯಿತು. ಆ ದಿನವನ್ನು ಗಣರಾಜ್ಯ ದಿನ ಎಂದು ಘೋಷಿಸಲಾಯಿತು. ಭಾರತೀಯ ಸಂವಿಧಾನವನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತದ ಮೊದಲ ಕಾನೂನು ಸಚಿವ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಈ ದಿನ ಗೌರವ ಸಲ್ಲಿಸಲಾಗುತ್ತದೆ ಎಂದು ಪ.ಪಂ.ಸದಸ್ಯ ಅಶೋಕ ಚಲವಾದಿ ಹೇಳಿದರು.
ಈ ಸಂದರ್ಭದಲ್ಲಿ ಬೌದ್ಧ ಸನ್ಯಾಸಿ, ಪರಮೇಶ, ಪ್ರಕಾಶ, ನಿಂಗಪ್ಪ, ರಾಜು, ವಿರೂಪಾಕ್ಷಪ್ಪ, ಉಮೇಶ, ಡಾ.ವೀರಭದ್ರ ಕಾಳೆ, ರವಿ ಹಾವೇರಿ ಮೈಲಾರಿ ಮುಂತಾದವರಿದ್ದರು.
ಸಂವಿಧಾನ ದಿನಾಚರಣೆ…..

ಮುಂಡಗೋಡ : ಮುಂಡಗೋಡದ ನಾರ್ತ ಕರ್ನಾಟಕ ಜೆಜ್ವಿತ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಸೊಸೈಟಿ ಮತ್ತು ಲೊಯೋಲಾ ವಿಕಾಸ ಕೇಂದ್ರದ ಆಶ್ರಯದಲ್ಲಿ ಇಂದು ಸಂವಿಧಾನ ದಿನಾಚರಣೆ ಕಾರ್ಯಕ್ರಮ ನಡೆಯಿತು. ಪ್ರವಾಸಿ ಮಂದಿರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಗೋಪಾಲಕೃಷ್ಣ ಜಾಥಾವನ್ನು ಉದ್ಘಾಟಿಸಿದರು.