Headlines

ವಿಶ್ವ ಶಾಂತಿಗಾಗಿ ಕಾವೇರಿ ನದಿಯಲ್ಲಿ ಒಂದು ಲಕ್ಷ ಮೀನುಗಳನ್ನು ಬಿಟ್ಟ ಮುಂಡಗೋಡ ಟಿಬೆಟಿಯನ್ನರು…..

Share Now

ಮುಂಡಗೋಡ : ಟಿಬೆಟಿಯನ್ನರ ಹೊಸ ವರ್ಷವಾದ ಲೊಸಾರ್ ಹಬ್ಬದ ಚಂದ್ರನ ಚಲನೆಯ ಕ್ಯಾಲೆಂಡರ್ ಪ್ರಕಾರ ಇಂದು 15ನೇ ದಿನವಾಗಿದೆ.

ಇದರ ಪ್ರಯುಕ್ತ ಇಂದು ಮುಂಡಗೋಡ ಟಿಬೆಟಿಕಾಲೋನಿಯ ಟಿಬೆಟಿಯನ್ನರು ಒಟ್ಟು 5ಲಕ್ಷರೂ. ವೆಚ್ಚದಲ್ಲಿ ಒಂದು ಲಕ್ಷ ಮೀನುಗಳನ್ನು ಖರೀದಿಸಿ, ವಿಶ್ವ ಶಾಂತಿಗಾಗಿ ಕಾವೇರಿ ನದಿಯಲ್ಲಿ ಬಿಡುವ ಕಾರ್ಯಕ್ರಮ ನಡೆಯಿತು ಎಂದು ಟಿಬೆಟಿಕಾಲೋನಿಯ ಟಿಬೆಟನ್ ಆಡಳಿತ ಕಚೇರಿಯ ಚೇರಮನ್ ಲಾಗ್ಫಾ ತ್ಸಿರಿಂಗ್ ತಿಳಿಸಿದ್ದಾರೆ.

ಬೌದ್ಧಮಠಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ…..

ಮುಂಡಗೋಡ : ಟಿಬೆಟಿಯನ್ನರ ಹೊಸ ವರ್ಷವಾದ ಲೊಸಾರ್ ಹಬ್ಬದ ಚಂದ್ರನ ಚಲನೆಯ ಕ್ಯಾಲೆಂಡರ್ ಪ್ರಕಾರ ಇಂದು 15ನೇ ದಿನವಾದ ಹಿನ್ನೆಲೆಯಲ್ಲಿ ಮುಂಡಗೋಡ ಟಿಬೆಟಿಕಾಲೋನಿಯ ಬೌದ್ಧಮಠಗಳಲ್ಲಿ

ಇಂದು ರಾತ್ರಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು ಎಂದು ಬೌದ್ಧ ಸನ್ಯಾಸಿ ಜಂಪಾ ಲಾಮಾ ತಿಳಿಸಿದ್ದಾರೆ.

ಹಲವು ಕಡೆಗಳಲ್ಲಿ ಮಳೆ-ಗಾಳಿ…..

ಮುಂಡಗೋಡ : ಹುನಗುಂದ, ಇಂದೂರ ಸೇರಿದಂತೆ ಹಲವು ಕಡೆಗಳಲ್ಲಿ ಗಾಳಿ, ಗುಡುಗು, ಆಲಿಕಲ್ಲು ಸಹಿತ ಇಂದು ಸಾಯಂಕಾಲ ಮಳೆಯಾಗಿದೆ.

ಬಿಸಿಲ ಬೇಗೆಯಿಂದ ಬಸವಳಿದಿದ್ದ ತಾಲೂಕಿನ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಮುಂಡಗೋಡನಲ್ಲಿ ಭರ್ಜರಿ ಗಾಳಿ ಹಾಗೂ ಹನಿ ಹನಿ ಮಳೆಯಾಗಿದೆ.

ಶಿರಸಿ ರಸ್ತೆಯಲ್ಲಿ ಮರ ಬಿದ್ದು ಕೆಲ ಹೊತ್ತು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.ನಂತರ ರಸ್ತೆ ಮೇಲೆ ಬಿದ್ದ ಮರವನ್ನು ತೆರವುಗೊಳಿಸಿದ ನಂತರ ರಸ್ತೆ ಸಂಚಾರ ಎಂದಿನಂತೆ ಆರಂಭವಾಯಿತು.