
ವರದಿ : ಮಂಜುನಾಥ ನಡಿಗೇರ, ಇಂದೂರ
ಮುಂಡಗೋಡ : ಪ್ರತಿ ವರ್ಷದಂತೆ ತಾಲೂಕಿನ ಕೊಪ್ಪ ಗ್ರಾಮದ ಶ್ರೀ ಮಾರಿಕಾಂಬಾ(ದ್ಯಾಮವ್ವ) ದೇವಿಯ ಉಡಿ ತುಂಬುವ ಕಾರ್ಯಕ್ರಮವನ್ನು ಶುಕ್ರವಾರ ಗ್ರಾಮಸ್ಥರು ನೆರವೇರಿಸಿದರು.
ಸಂಪ್ರದಾಯದಂತೆ ದೇವಿಯ ತವರು ಮನೆಯಾದ ಇಂದೂರಿನ ಹಿರಿಯರು ಮತ್ತು ಮಾತೆಯರನ್ನು ಕೊಪ್ಪ ಗ್ರಾಮದ ಹಿರಿಯರು ಡೊಳ್ಳಿನ ಮೆರವಣಿಗೆಯ ಮೂಲಕ ಬರಮಾಡಿಕೊಂಡರು. ನಂತರ ಉಡಿ ತುಂಬುವ ಕಾರ್ಯಕ್ರಮ ನೆರೆವೇರಿತು. ನಂತರ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು.