ಸರ್ಕಾರ ಅವಕಾಶ ಕೊಡಲಿ ಬಿಡಲಿ ಗಣೇಶೋತ್ಸವ ಆಚರಿಸ್ತೀವಿ, ತಾಕತ್ ಇದ್ರೆ ತಡೆಯಲಿ: ಪ್ರಮೋದ್ ಮುತಾಲಿಕ್
ಬೆಂಗಳೂರು: ಸರ್ಕಾರ ಅವಕಾಶ ನೀಡಲಿ ಬಿಡಲಿ ನಾವು ಗಣೇಶೋತ್ಸವ ಆಚರಿಸ್ತೀವಿ. ಸರ್ಕಾರ ಅದ್ಹೇಗೆ ತಡೆಯುತ್ತೆ ಅಂತ ನಾವೂ ನೋಡ್ತೀವಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ. ಗಣೇಶ ಹಬ್ಬಕ್ಕೆ ಇನ್ನು 10 ದಿನ ಇದೆ. ಇಷ್ಟೊತ್ತಿಗೆ ಸಾರ್ವಜನಿಕ ಗಣೇಶೋತ್ಸವಕ್ಕೆ ತಯಾರಿ ಆಗಬೇಕಿತ್ತು. ಆದರೆ, ಸರ್ಕಾರ ಇನ್ನೂ ಗೈಡ್ಲೈನ್ಸ್ ಬಿಡುಗಡೆ ಮಾಡಿಲ್ಲ. ರಾಜಕೀಯ ಸಭೆ, ಸಮಾರಂಭಗಳಿಗೆ ಇರದ ನಿರ್ಬಂಧ ಗಣೇಶ ಹಬ್ಬಕ್ಕೆ ಏಕೆ? ಗಣೇಶೋತ್ಸವ ಆಚರಿಸಿದ್ರೆ ಮಾತ್ರ ಕೊರೊನಾ ಹರಡುತ್ತಾ? ರಾಜ್ಯದಲ್ಲಿ ಪಾಲಿಕೆ ಚುನಾವಣೆ ನಡೆಯುತ್ತಿದೆ. ಸಾವಿರಾರು…