ಪ್ರತೀಕಾರ ಮುಗಿದಿಲ್ಲ: ಐಸಿಸ್ ಖುರಾಸನ್ ಉಗ್ರರಿಗೆ ಜೋ ಬೈಡನ್ ಖಡಕ್ ಎಚ್ಚರಿಕೆ
ವಾಷಿಂಗ್ಟನ್: ನಿಮ್ಮ ವಿರುದ್ಧದ ಪ್ರತೀಕಾರ ಮುಗಿದಿಲ್ಲ ಎಂದು ಅಫ್ಗಾನಿಸ್ತಾನದಲ್ಲಿರುವ ಐಸಿಸ್ ಖುರಾಸನ್ ಉಗ್ರರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಖಡಕ್ ಸಂದೇಶ ರವಾನಿಸಿದ್ದಾರೆ. ‘ಅಫ್ಗಾನಿಸ್ತಾನ ಮತ್ತು ಇತರ ದೇಶಗಳಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ನಾವು ಮುಂದುವರಿಸಲಿದ್ದೇವೆ. ಐಸಿಸ್ ಖುರಾಸನ್ ವಿರುದ್ಧದ ನಮ್ಮ ಹೋರಾಟವೂ ಮುಗಿದಿಲ್ಲ’ ಎಂದು ಬೈಡನ್ ಹೇಳಿದ್ದಾರೆ. ಐಸಿಸ್ ಖುರಾಸನ್ ಉಗ್ರರು ಅಫ್ಗಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ನಡೆಸಿದ್ದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಅಮೆರಿಕದ 13 ಮಂದಿ ಯೋಧರು ಮತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಅಮೆರಿಕ ನಡೆಸಿದ್ದ ಡ್ರೋನ್…