ಚವಡಳ್ಳಿ ಗ್ರಾಮದಲ್ಲಿ ಸರಾಯಿ ಪಾಕೀಟು ಸುಟ್ಟು ಹಾಕಿ ಜನ ಜಾಗೃತಿ ಮೂಡಿಸಿದ ಯುವಕರು, ಗ್ರಾಮಸ್ಥರು….!

Spread the love
ಚವಡಳ್ಳಿಯಲ್ಲಿ ಸರಾಯಿ ಪಾಕೀಟನ್ನು ಸುಟ್ಟು ಹಾಕುತ್ತಿರುವುದು.

ಮುಂಡಗೋಡ : ಸರಾಯಿ ವಿರುದ್ಧ ಜನಜಾಗೃತಿ ಗ್ರಾಮೀಣ ಭಾಗದಲ್ಲಿ ನಿಧಾನವಾಗಿ ಆಗುತ್ತಿದೆ. ಮೊನ್ನೆಯಷ್ಟೇ ತಾಲೂಕಿನ ಕಾಳಗನಕೊಪ್ಪ ಗ್ರಾಮದಲ್ಲಿ ಮಹಿಳೆಯರು ಸಿಡಿದೆದ್ದು ಗ್ರಾಮದಲ್ಲಿ ಸರಾಯಿ ಮಾರುವುದನ್ನು ಬಂದ್ ಮಾಡಿಸಿದ್ದರು.
ಈ ಘಟನೆಯಿಂದ ಪ್ರೇರಿತರಾಗಿ ಚೌಡಳ್ಳಿಯಲ್ಲಿ ಗುರುವಾರ ರಾತ್ರಿ ಗ್ರಾಮಸ್ಥರು ಹಾಗೂ ಯುವಕರು ಒಂದಾಗಿ ಇನ್ನು ಮುಂದೆ ಸರಾಯಿ ಯಾರೂ ಮಾರಾಟ ಮಾಡಬಾರದೆಂದು ಅಂಗಡಿಕಾರರಿಗೆ ಮನವಿ ಮಾಡಿದರು. ಇದಕ್ಕೆ ಅಂಗಡಿಕಾರರು ಸ್ಪಂದಿಸಿದ್ದಾರೆ ಎನ್ನಲಾಗಿದೆ.
ಲಾಕಡೌನ್ ಸಮಯದಲ್ಲಿ ಪಕ್ಕದ ಊರಿನ ಕೆಲವರು ಚೌಡಳ್ಳಿ ಗ್ರಾಮಕ್ಕೆ ಬಂದು ಸರಾಯಿ ಖರೀದಿಸಿ, ಕುಡಿಯುತ್ತಿದ್ದರು. ಇದನ್ನು ತಪ್ಪಿಸಲು ಹಾಗೂ ಗ್ರಾಮದಲ್ಲಿ ಸರಾಯಿ ಚಟದಿಂದ ಕಡಿಮೆ ಮಾಡಲು ಗ್ರಾಮಸ್ಥರು ಸ್ವ ಪ್ರೇರಣೆಯಿಂದ ಗುರುವಾರ ಚೌಡಳ್ಳಿ ಗ್ರಾಮದಲ್ಲಿ ಸರಾಯಿ ಪಾಕೆಟ್ ಸುಟ್ಟು ಜನರಲ್ಲಿ ಜಾಗ್ರತೆ ಮೂಡಿಸಿದರು. ಇನ್ನು ಮುಂದೆ ಯಾರೂ ಸಹ ಸರಾಯಿ ಕುಡಿಯದಂತೆ ಎಚ್ಚರಿಸಿದ್ದರು. ಆದರೂ ಸಹ ಶುಕ್ರವಾರ ವ್ಯಕ್ತಿಯೊಬ್ಬ ಕುಡಿದಿದ್ದನ್ನು ಗಮನಿಸಿದ ಗ್ರಾಮಸ್ಥರು ಆತನನ್ನು ತಡೆದು ಯಾವ ಅಂಗಡಿಯಿಂದ ತಂದೆ ಎಂದು ಕೇಳಿದಾಗ ಆತ ಉತ್ತರಿಸಲಿಲ್ಲ ಎನ್ನಲಾಗಿದೆ.
ಆದರೆ ಗ್ರಾಮೀಣ ಭಾಗದಲ್ಲಿ ಸರಾಯಿ ಮುಕ್ತವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು