ಶಿಗ್ಗಾವಿ : ಕರ್ನಾಟಕ ವಿಧಾನಸಭಾ ಚುನಾವಣೆಗೆ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ನಾಮಪತ್ರ ಸಲ್ಲಿಸಿದ್ದು, ಚುನಾವಣಾ ಅಫಿಡವಿಟ್ನಲ್ಲಿ ತಮ್ಮ ಆಸ್ತಿ ಘೋಷಣೆ ಮಾಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಳಿ 49.70 ಕೋಟಿ ಆಸ್ತಿ ಹೊಂದಿದ್ದಾರೆ ಎಂದು ಅವರು ಶನಿವಾರ ಚುನಾವಣಾಧಿಕಾರಿಯ ಮುಂದೆ ಹಾವೇರಿ ಜಿಲ್ಲೆಯ ಶಿಗ್ಗಾಂವ್ ಕ್ಷೇತ್ರದಿಂದ ಸ್ಪರ್ಧಿಸಲು ಚುನಾವಣಾ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.
ಹೂಡಿಕೆ ವಿವರಗಳು ಅವರು 5.98 ಕೋಟಿ ಚರ ಆಸ್ತಿಯನ್ನು ಹೊಂದಿದ್ದು, ಹಿಂದೂ ಅವಿಭಜಿತ ಕುಟುಂಬದಿಂದ 1.57 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. ಇದಲ್ಲದೆ ಅವರ ಪತ್ನಿ ಚನ್ನಮ್ಮ 1.14 ಕೋಟಿ ಹಾಗೂ ಪುತ್ರಿ ಅದಿತಿ 1.12 ಕೋಟಿ ಹೂಡಿಕೆ ಮಾಡಿದ್ದಾರೆ. ಅವರ ಮಗ ಭರತ್ ಬೊಮ್ಮಾಯಿ ತಂದೆಯ ಮೇಲೆ ಅವಲಂಬಿತವಾಗಿಲ್ಲದ ಕಾರಣ, ಅವರ ಹೂಡಿಕೆ ವಿವರಗಳನ್ನು ಉಲ್ಲೇಖಿಸಲಾಗಿಲ್ಲ.
ಅವರ ಪುತ್ರ ಭರತ್ ಗೆ 14.74 ಲಕ್ಷ ರೂ. ನೀಡಿದ್ದಾರೆ. ಅಲ್ಲದೆ ಬೊಮ್ಮಾಯಿ ಅವರಿಗೆ 42.15 ಕೋಟಿ ರೂಪಾಯಿ ಸ್ಥಿರಾಸ್ತಿ ಹೊಂದಿದ್ದಾರೆ, ಇದರಲ್ಲಿ ಹಿಂದೂ ಅವಿಭಜಿತ ಕುಟುಂಬದ 19.2 ಕೋಟಿ ರೂ. ಸೇರಿದೆ. ಬೊಮ್ಮಾಯಿ ಅವರಿಗೆ 5.79 ಕೋಟಿ ರೂ. ಸಾಲ ಇದೆ. ಬೊಮ್ಮಾಯಿ ಅವರು ಮಾರ್ಚ್ 26, 2022 ರಂದು ಮುಖ್ಯಮಂತ್ರಿಯಾಗಿದ್ದಾಗ ಧಾರವಾಡದ ಹುಬ್ಬಳ್ಳಿ ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಸುಮಾರು ಮೂರು ಎಕರೆ ಭೂಮಿಯನ್ನು ಖರೀದಿಸಿದ್ದಾರೆ ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ. ಒಟ್ಟಾರೆ ಬೊಮ್ಮಾಯಿ ಮತ್ತು ಅವರ ಅವಲಂಬಿತರ ಆಸ್ತಿ 52.12 ಕೋಟಿ ರೂ. ಆಗಿದೆ ಎಂದು ತಿಳಿಸಲಾಗಿದೆ.