ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ( Karnataka Assembly Election 2023 ) ಮೇ.10ರಂದು ಮತದಾನ ನಡೆಯಲಿದೆ. ಮೇ.13ಕ್ಕೆ ಮತಏಣಿಕೆ ನಡೆದು, ಫಲಿತಾಂಶ ಪ್ರಕಟವಾಗಲಿದೆ. ಇದಕ್ಕಾಗಿ ಚುನಾವಣಾ ಆಯೋಗವು ಎಲ್ಲಾ ತಯಾರಿ ಮಾಡಿಕೊಂಡಿದೆ. ರಾಜ್ಯ ವಿಧಾನಸಭಾ ಚುನಾವಣೆ ( Assembly Election ) ಸಂಬಂಧ ಆ ಮಾಹಿತಿಯನ್ನು ಜನತೆಗಾಗಿ ಹಂಚಿಕೊಂಡಿದೆ.
ಅದರ ಬಗ್ಗೆ ಮುಂದೆ ಓದಿ.
ಕರ್ನಾಟಕದಲ್ಲಿ ಪ್ರಸ್ತುತ ವಿಧಾನಸಭೆಯ ಅವಧಿ ಮುಕ್ತಾಯಗೊಳ್ಳಲಿದೆ. ಹೀಗಾಗಿ ಅವಧಿ ಮುಗಿಯುವ ಮೊದಲು ಭಾರತ ಚುನಾವಣಾ ಆಯೋಗದ ( Election Commission of India – ECI ) ನಿರ್ದೇಶನಗಳ ಪ್ರಕಾರ ಅರ್ಹತಾ ದಿನಾಂಕವಾಗಿ 01-01-2023ರಂದು ಮತದಾರರ ಭಾವಚಿತ್ರ ಪಟ್ಟಿಯ ವಿಶೇಷ ಸಾರಾಂಶ ಪರಿಷ್ಕರಣೆಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿಯನ್ನು 05-01-2023 ಮತ್ತು 15-01-2023ರಂದು ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ.
ಮತದಾರರ ಪಟ್ಟಿಯ ಪ್ರಮುಖ ಅಂಕಿ-ಅಂಶಗಳು
ಕರ್ನಾಟಕ ಸಾರ್ವತ್ರಿಕ ಚುನಾವಣೆಯನ್ನು ದಿನಾಂಕ 29-03-2023ರಂದು ಘೋಷಿಸಲಾಗಿದೆ. ದಿನಾಂಕ 20-04-2023ರವೆರೆಗೆ ಮತದಾರರ ನೋಂದಣಿ ಚಟುವಚಿಕೆಗಳನ್ನು ಕೈಗೊಳ್ಳಲಾಗಿತ್ತು. ಅದರಂತೆ 2,66,82,156 ಪುರುಷ ಮತದಾರರಿದ್ದಾರೆ. 2,63,98,483 ಮಹಿಳೆ, 4,927 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 5,30,85,566 ಮತದಾರರು ಇದ್ದಾರೆ ಎಂದು ತಿಳಿಸಿದೆ.
ಯುವ ಮತದಾರರ ಸಂಖ್ಯೆ
ರಾಜ್ಯ ಚುನಾವಣೆಯ ಹೊತ್ತಿಗೆ 6,45,140 ಪುರುಷ ಯುವ ಮತದಾರರು ಇದ್ದಾರೆ. 5,26,237 ಮಹಿಳೆ, 181 ಇತರೆ ಸೇರಿದಂತೆ ಒಟ್ಟು 11,71,558 ಯುವಮತದಾರರು ತಮ್ಮ ಮತದಾನವನ್ನು ಈ ಬಾರಿ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದೆ.
80 ವರ್ಷ ಮೇಲ್ಪಟ್ಟ ಹಿರಿಯ ಮತದಾರರ ಸಂಖ್ಯೆ
ಇನ್ನೂ ಇದೇ ಮೊದಲ ಬಾರಿಗೆ ಹಿರಿಯ ನಾಗರೀಕರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ 5,46,487 ಪುರುಷ, 6,69,417 ಮಹಿಳೆ, 16 ಇತರೆ ಸೇರಿದಂತೆ 12,15,920 ಮತದಾರರು 80 ವರ್ಷ ಮೇಲ್ಪಟ್ಟವರು ಇದ್ದಾರೆ. ಇವರು ಮನೆಯಿಂದಲೇ ಮತದಾನ ಮಾಡಲಿದ್ದಾರೆ.
ಮತಗಟ್ಟೆ ಕೇಂದ್ರಗಳ ಮಾಹಿತಿ
ಕರ್ನಾಟಕದ ವಿಧಾನಸಭಾ ಚುನಾವಣೆ 2018ರ ಸಂದರ್ಭದಲ್ಲಿ 56,696 ಮತಗಟ್ಟೆಗಳನ್ನು ನಿರ್ಮಿಸಲಾಗಿತ್ತು. 2023ರ ಚುನಾವಣೆಯ ವೇಳೆಯಲ್ಲಿ 58,282 ಮತ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಈ ಬಾರಿ ಹೆಚ್ಚುವರಿಯಾಗಿ 263 ಮತಕೇಂದ್ರಗಳು ಸೇರಿದಂತೆ ಒಟ್ಟು 58,464 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಮತಗಟ್ಟೆ ಸಿಬ್ಬಂದಿ ವಿವರ
ಈ ಬಾರಿಯ ಚುನಾವಣೆಗಾಗಿ 71,000 ಚುನಾವಣಾಧಿಕಾರಿಗಳನ್ನು, 91,380, 93,378, 95,395 ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಹೆಚ್ಚುವರಿಯಾಗಿ 8,100 ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟು 3,59,253 ಮತಗಟ್ಟೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ವೀಕ್ಷಕರನ್ನಾಗಿ 17,276, ಬಿಎಲ್‌ಓಗಳ 58,282, ಬಿಎಲ್‌ಓ ಮೇಲ್ವಿಚಾರಕರು 5,828, ಸೆಕ್ಟರ್ ಅಧಿಕಾರಿಗಳು 4,954 ನಿಯೋಡಿಸಲಾಗಿದೆ.
ಮಾದರಿ ನೀತಿ ಸಂಹಿತೆ ಉಲ್ಲಂಘನೆ ದೂರು
ಈವರೆಗೆ Rally, ಸಾರ್ವಜನಿಕ ಸಭೆಗಳು, ವಿಧಾನಸಭೆಗಳು ಅನಧಿಕೃತ ಪ್ರಚಾರ ಸಂಬಂಧ 53 ಎಫ್‌ಐಆರ್ ದಾಖಲಿಸಲಾಗಿದೆ. ಗುಂಪು ಘರ್ಷನೆ, ಪೈಪೋಟಿ ಸಂಬಂಧ 15, ಧಾರ್ಮಿಕ ಸ್ಥಳಗಳ ದುರುಪಯೋ 15, ಅನುಮತಿ ಪಡೆಯದೋ ಧ್ವನಿ ವರ್ಧಕ ಬಳಕೆ, ಬ್ಯಾನರ್, ಬಟ್ಟಿಂಗ್ಸ್ ಬಳಕೆ ಸಂಬಂಧ 35, ದ್ವೇಷ ಭಾಷಣದ ಸಂಬಂಧ 5, ಸಾರ್ವಜನಿಕ ಸ್ಥಳಗಳಲ್ಲಿ ಬಳಕೆ 75, ಮತದಾರರಿಗೆ ಆಮಿಷ 309, ಅನುಮತಿಯಿಲ್ಲದೇ ಪತ್ರಿಕೆಗಳ ಮುದ್ರಣ ಸಂಬಂಧ 83 ಎಫ್‌ಐಆರ್, ಸಾಮಾಜಿಕ ಜಾಲತಾರಣಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ 34, ಇತರೆ 50 ಸೇರಿದಂತೆ ಈವರೆಗೆ ನೀತಿ ಸಂಹಿತೆ ಉಲ್ಲಂಘನೆ ಹಿನ್ನಲೆಯಲ್ಲಿ 673 ಎಫ್‌ಐಆರ್ ದಾಖಲಿಸಲಾಗಿದೆ.
ಮಾದರಿ ನೀತಿ ಸಂಹಿತೆಗಾಗಿ ನಿಯೋಜನೆ
ರಾಜ್ಯ ವಿಧಾನಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಪಾಲನೆಗಾಗಿ 54,682 ನಾಗರೀಕ ಪೊಲೀಸ್, 20 ಸಾವಿರ ಹೋಮ್ ಗಾರ್ಡ್ಸ, 90 ಕೆ ಎಸ್ ಆರ್ ಪಿ ತುಕಡಿ, 5,037 ಸಿಎಆರ್, ಡಿಎಆರ್ ಹಾಗೂ 650ಕ್ಕೂ ಹೆಚ್ಚು ಎಸ್‌ಎಪಿ, ಸಿಎಪಿಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಜಪ್ತಿಯಾದ ಹಣ ಮತ್ತು ಉಡುಗೋರೆಗಳು
ಚುನಾವಣಾ ನೀತಿ ಸಂಹಿತೆಯ ಹಿನ್ನಲೆಯಲ್ಲಿ ನಿನ್ನೆಯವರೆಗೆ 88,03,02,632 ನಗದು ಜಪ್ತಿ ಮಾಡಲಾಗಿದೆ. ಉಚಿತ ಉಡುಗೋರೆ ಎನ್ನುವಂತೆ ನೀಡಲು ತಂದಿದ್ದ 20,62,10,064 ಮೌಲ್ಯ ವಸ್ತುಗಳನ್ನು ಸೀಜ್ ಮಾಡಲಾಗಿದೆ. ನಿನ್ನೆಯವರೆಗೆ ರಾಜ್ಯಾಧ್ಯಂತ 59,92,49,246 ಮೌಲ್ಯದ 15,16,847 ಲೀಟರ್ ಮಧ್ಯವನ್ನು ಜಪ್ತಿ ಮಾಡಲಾಗಿದೆ. ಒಟ್ಟಾರೆಯಾಗಿ 2,65,20,04,702 ರಷ್ಟು ಮೌಲ್ಯದ ಹಣ, ಉಡುಗೋರೆ, ಮಧ್ಯ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಾಖಲಾದ ಪ್ರಕರಣಗಳ ವಿವರ
2,036 ಎಫ್‌ಐಆರ್ ದಾಖಲಿಸಲಾಗಿದ್ದರೇ, 13,640 ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲಾಗಿದೆ. ಅಬಕಾರಿ ಇಲಾಖೆಯಿಂದ 19,122 ಪ್ರಕರಣಗಳನ್ನು ದಾಖಲಿಸಲಾಗಿದದು 1,776 ವಿವಿಧ ಮಾದರಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಣದಲ್ಲಿರುವ ಅಭ್ಯರ್ಥಿಗಳ ವಿವರ
ಕರ್ನಾಟಕ ವಿಧಾನಸಭಾ ಚುನಾವಣೆ-2023ಕ್ಕೆ 2,427 ಪುರುಷರು, 185 ಮಹಿಳೆಯರು, ಒಬ್ಬರು ಇತರೆ ಸೇರಿದಂತೆ ಒಟ್ಟು 2,613 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಇದ್ದಾರೆ.
ಅತಿ ಹೆಚ್ಚು ಅಭ್ಯರ್ಥಿಗಳು, ಕಡಿಮೆ ಅಭ್ಯರ್ಥಿಗಳನ್ನು ಹೊಂದಿರುವ ವಿಧಾನಸಭಾ ಕ್ಷೇತ್ರದ ಮಾಹಿತಿ
ರಾಜ್ಯದಲ್ಲಿ ಅತಿಹೆಚ್ಚು ಅಭ್ಯರ್ಥಿಗಳನ್ನು ಹೊಂದಿರುವ ವಿಧಾನಸಭಾ ಕ್ಷೇತ್ರ ಬಳ್ಳಾರಿ ನಗರವಾಗಿದೆ. ಇಲ್ಲಿ 24 ಜನ ಅಭ್ಯರ್ಥಿಗಳಿದ್ದಾರೆ. ಅತಿ ಕಡಿಮೆ ಅಭ್ಯರ್ಥಿಗಳನ್ನು ಹೊಂದಿರುವ ವಿಧಾನಸಭಾ ಕ್ಷೇತ್ರ ಯಮಕನಮರಡಿ ಎಸ್ಟಿ ಮೀಸಲು ಕ್ಷೇತ್ರ, ದೇವದುರ್ಗ ಎಸ್ಟಿ ಮೀಸಲು ಕ್ಷೇತ್ರ, ತೀರ್ಥಹಳ್ಳಿ, ಕುಂದಾಪುರ, ಕಾಪು, ಮಂಗಳೂರು ಮತ್ತು ಬಂಟ್ವಾಳವಾಗಿದೆ. ಇಲ್ಲಿ ಐವರು ಅಭ್ಯರ್ಥಿಗಳಿದ್ದಾರೆ.