ಮುಂಡಗೋಡ : ಕೆಲವು ಅಧಿಕಾರಿಗಳ ವರ್ಗಾವಣೆಗೆ ಮುಹೂರ್ತ ಫಿಕ್ಸ್..!

Spread the love

ಮುಂಡಗೋಡ : ರಾಜ್ಯದಲ್ಲಿ ಕಾಂಗ್ರೆಸ ಆಡಳಿತ ಚುಕ್ಕಾಣಿ ಹಿಡಿದಿದೆ. ಯಾವುದೇ ಹೊಸ ಸರಕಾರ ಆಡಳಿತಕ್ಕೆ ಬಂದರೂ ಆ ಸರಕಾರ ಮಾಡುವ ಮೊದಲ ಕೆಲಸವೆಂದರೆ ಅಧಿಕಾರಿಗಳ ವರ್ಗಾವಣೆ..!

ಅದರಂತೆ ಈಗ ಕಾಂಗ್ರೆಸ ಸರಕಾರವು ರಾಜ್ಯದ, ಜಿಲ್ಲೆಯ ಹಾಗೂ ತಾಲೂಕಾ ಕೇಂದ್ರದಲ್ಲಿ ಕೆಲವು ಅಧಿಕಾರಿಗಳ ವರ್ಗಾವಣೆಗೆ ತಯಾರಿ ನಡೆಸಿದೆ.

ಮುಂಡಗೋಡ ತಾಲೂಕಿನಲ್ಲಿ ಕೆಲವು ಅಧಿಕಾರಿಗಳ ವರ್ಗಾವಣೆಗೆ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದೆ. ತಾಲೂಕಿನ ಕಾಂಗ್ರೆಸ ಮುಖಂಡರು ಸಂಬಂಧಪಟ್ಟ ಸಚಿವರೊಮದಿಗೆ ಮಾತನಾಡಿ, ವರ್ಗಾವಣೆಗೆ ಪಟ್ಟು ಹಿಡಿದಿರುವ ವಿಷಯ ಈಗ ಗುಟ್ಟಾಗಿ ಉಳಿದಿಲ್ಲ.

ಮುಂಡಗೋಡ ತಾಲೂಕಿನ ಕೆಲ ಅಧಿಕಾರಿಗಳು ಬಿ.ಜೆ.ಪಿ. ಅಧಿಕಾರಿಗಳಾಗಿದ್ದಾರೆ. ನಮ್ಮ ಯಾವುದೇ ಕೆಲಸ ಮಾಡುವುದಿಲ್ಲ. ಅವರನ್ನು ಇಲ್ಲಿಂದ ವರ್ಗಾವಣೆ ಮಾಡದಿದ್ದರೆ ಕಾಂಗ್ರೆಸ ಪಕ್ಷವನ್ನು ನೀರ್ಮಣ್ಣು ಮಾಡುತ್ತಾರೆ… ನಾಮಾವಶೇಷ ಮಾಡುತ್ತಾರೆ. ಪಕ್ಷವನ್ನು ಬಲಪಡಿಸಬೇಕಾದರೆ, ಕಾರ್ಯಕರ್ತರ ಕೆಲಸ ಮತ್ತು ಅಭಿವೃದ್ಧಿ ಕೆಲಸ ಆಗಬೇಕಾದರೆ ಈ ಅಧಿಕಾರಿಗಳನ್ನು ಇಲ್ಲಿಂದ ವರ್ಗಾವಣೆ ಮಾಡಲೇಬೇಕೆಂದು ಕೆಲವು ಸಚಿವರಲ್ಲಿ ಕಾಂಗ್ರೆಸ ಮುಖಂಡರು ಒತ್ತಾಯ ಮಾಡಿದ್ದು, ಸಂಬಂಧಪಟ್ಟ ಸಚಿವರು ಕೂಡ ಅಧಿಕಾರಿಗಳ ವರ್ಗಾವಣೆಗೆ ಓಕೆ ಎಂದಿದ್ದಾರೆಂದು ತಿಳಿದುಬಂದಿದೆ.

**********