ನವದೆಹಲಿ: ಇಂದು ದೇಶಾದ್ಯಂತ ಕಾರ್ಗಿಲ್ ವಿಜಯ್ ದಿವಸ್(Kargil Vijay Diwas) ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 1999 ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಗೆಲುವಿಗೆ ಸರ್ವೋಚ್ಚ ತ್ಯಾಗ ಮಾಡಿದ ಸೈನಿಕರಿಗೆ ಗೌರವ ಸಲ್ಲಿಸಿದರು.
ʻಈ ದಿನವು ಭಾರತದ ಅಪ್ರತಿಮ ಯೋಧರ ಶೌರ್ಯವನ್ನು ಮುನ್ನೆಲೆಗೆ ತರುತ್ತದೆ, ಅವರು ಯಾವಾಗಲೂ ದೇಶದ ಜನರಿಗೆ ಸ್ಫೂರ್ತಿಯ ಮೂಲವಾಗಿ ಉಳಿಯುತ್ತಾರೆ.. ಜೈ ಹಿಂದ್ʼ ಎಂದು ಪ್ರಧಾನಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
1999 ರಲ್ಲಿ ಲಡಾಖ್ನಲ್ಲಿ ರಹಸ್ಯವಾಗಿ ಆಕ್ರಮಿಸಿಕೊಂಡಿದ್ದ ಪಾಕಿಸ್ತಾನಿ ಪಡೆಗಳನ್ನು ಹಿಮ್ಮೆಟ್ಟಿಸಲು ಭಾರತೀಯ ಸೇನೆಯು ಉಗ್ರ ಪ್ರತಿದಾಳಿ ನಡೆಸಿತ್ತು. ಕಾರ್ಗಿಲ್ ವಿಜಯ್ ದಿವಸ್ ಅನ್ನು ಭಾರತ ತನ್ನ ನೆರೆಯ ರಾಷ್ಟ್ರದ ವಿರುದ್ಧದ ಗೆಲುವನ್ನು ಗುರುತಿಸಲು ಆಚರಿಸಲಾಗುತ್ತದೆ.