
ಮುಂಬೈ : ಹಿಂದಿ ಚಿತ್ರರಂಗದ ದಿಗ್ಗಜ ದಿಲೀಪ್ ಕುಮಾರ ಇಂದು ಬೆಳಗ್ಗೆ 7:30ಕ್ಕೆ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ನಿಧನರಾದರು.
98 ವರ್ಷ ವಯಸ್ಸಿನ ಹಿರಿಯ ನಟ ದಿಲೀಪ್ ಕುಮಾರ್ ಬಹುಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ದಿಲೀಪ್‌ರನ್ನು ಹಲವು ಬಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜೂನ್ 30 ರಂದು ಮುಂಬೈನ ಹಿಂದೂಜಾ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿತ್ತು. ಇದಕ್ಕೂ ಮೊದಲು ದಿಲೀಪ್ ಕುಮಾರ್ ಅವರು ಜೂನ್ 6 ರಂದು ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಐದು ದಿನಗಳ ನಂತರ ಬಿಡುಗಡೆಯಾಗಿದ್ದರು.
ಬಾಲಿವುಡ್‌ನ ‘ಟ್ರಾಜಿಡಿ ಕಿಂಗ್’ ಎಂದೇ ಕರೆಯಲ್ಪಡುವ ಹಿರಿಯ ನಟ ಆರು ದಶಕಗಳವರೆಗಿನ ತಮ್ಮ ವೃತ್ತಿಜೀವನದಲ್ಲಿ 65 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ
‘ದೇವದಾಸ್’ (1955), ‘ನಯಾ ದೌರ್’ (1957), ‘ಮೊಘಲ್-ಎ-ಅಜಮ್’ (1960), ‘ಗಂಗಾ ಜಮುನಾ’ (1961), ‘ಕ್ರಾಂತಿ’ (1981), ಮತ್ತು ‘ಕರ್ಮ’ (1986) ಈ ಸಿನೆಮಾಗಳಲ್ಲಿ ದಿಲೀಪ್ ಮಿಂಚಿದ್ದಾರೆ.