ವನಶ್ರೀ ವನಧನ ವಿಕಾಸ ಕೇಂದ್ರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು : ಜಗದೀಶ ಕಮ್ಮಾರ ಕರೆ

Spread the love

ಮುಂಡಗೋಡ : ವನಶ್ರೀ ವನಧನ ವಿಕಾಸ ಕೇಂದ್ರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ ಕರೆ ನೀಡಿದರು. ಮುಂಡಗೋಡ ತಾಲೂಕ ಪಂಚಾಯತ ಸಭಾಭವನದಲ್ಲಿ ವನಶ್ರೀ ವನಧನ ವಿಕಾಸ ಕೇಂದ್ರ ಗುಂಜಾವತಿ, ಮೈನಳ್ಳಿ, ಕೆಂದಲಗೇರಿಯ ಸದಸ್ಯಯರಿಗೆ ಅಂಟವಾಳಕಾಯಿ ಗಿಡವನ್ನು ವಿತರಿಸಿ ಅವರು ಮಾತನಾಡಿದರು.

ಎನ್.ಆರ್.ಎಲ್.ಎಂ. ಸಂಜೀವಿನಿ ಯೋಜನೆಯಡಿ ವನಶ್ರೀ ವನಧನ ವಿಕಾಸ ಕೇಂದ್ರದ ಮೂಲಕ ಗ್ರಾಮೀಣ ಭಾಗದ ಪರಿಶಿಷ್ಟ ಪಂಗಡದ ಮಹಿಳೆಯರಲ್ಲಿ ಸ್ವಾವಲಂಬಿ ಬದುಕು ಕಲ್ಪಿಸುವ ನಿಟ್ಟಿನಲ್ಲಿ ಅಂಟವಾಳಕಾಯಿ ಗಿಡವನ್ನು ವಿತರಿಸಲಾಯಿತು.

ಮುಂದಿನ ದಿನಗಳಲ್ಲಿ ಮಹಿಳೆಯರು ಜೇನು ಕೃಷಿ ಮಾಡುವ ಉದ್ದೇಶವನ್ನು ಹೊಂದಿರುವುದರಿಂದ ಅದಕ್ಕೆ ಅನುಕೂಲವಾಗುವಂತೆ ಅಂಟವಾಳಕಾಯಿ ಗಿಡವನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ಸಾಮಾಜಿಕ ವಲಯ ಅರಣ್ಯಾಧಿಕಾರಿಗಳು, ತಾಲೂಕ ಪಂಚಾಯತ ವ್ಯವಸ್ಥಾಪಕರಾದ ಪ್ರಕಾಶ ಎಂ.ಕೆ., ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕರು, ತಾಲೂಕ

ಸಂಜೀವಿನಿ ಸಿಬ್ಬಂದಿಯವರು, ಎಂ.ಬಿ.ಕೆ., ಎಲ್.ಸಿ.ಆರ್.ಪಿ.ಯವರು, ವಿ.ಡಿ.ವಿ.ಕೆ. ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕರಾದ ಶ್ಯಾಮಲಾ ನಾಯ್ಕ ಸ್ವಾಗತಿಸಿದರು. ರಾಮಣ್ಣ ಪನ್ನೇರ ವಂದಿಸಿದರು.