ಬಾಚಣಕಿ ಜಲಾಶಯದಲ್ಲಿ ಶೇ.80ರಷ್ಟು ನೀರು ಸಂಗ್ರಹ

Spread the love

ಮುಂಡಗೋಡ : ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮುಂಡಗೋಡ ತಾಲೂಕಿನ 5 ಜಲಾಶಯಗಳಲ್ಲಿ ನೀರು ಸಂಗ್ರಹವಾಗುತ್ತಿದೆ.

   ಬಾಚಣಕಿ ಜಲಾಶಯದಲ್ಲಿ ಶೇ.80ರಷ್ಟು ನೀರು ಸಂಗ್ರಹವಾಗಿದೆ. ಅತ್ತಿವೇರಿ ಜಲಾಶಯದಲ್ಲಿ ಶೇ.60ರಷ್ಟು, ರಾಮಾಪುರ ಜಲಾಶಯದಲ್ಲಿ ಶೇ.55ರಷ್ಟು, ನ್ಯಾಸರ್ಗಿ ಜಲಾಶಯದಲ್ಲಿ ಶೇ.65ರಷ್ಟು, ಸನವಳ್ಳಿ ಜಲಾಶಯದಲ್ಲಿ ಶೇ.75ರಷ್ಟು ನೀರು ಸಂಗ್ರಹವಾಗಿದೆ.

   ಇನ್ನು ತಾಲೂಕಿನಲ್ಲಿ 28 ಕೆರೆಗಳಿದ್ದು, ಅವುಗಳಲ್ಲಿ ಅಮ್ಮಾಜಿ ಕೆರೆ ತುಂಬಿದೆ.

   ಸಾಲಗಾಂವ ಕೆರೆ ಶೇ.95ರಷ್ಟು, ಅರಶಿಣಗೇರಿ ಕೆರೆ ಮತ್ತು ಆಲಳ್ಳಿ ಅಯ್ಯನಕೆರೆಯಲ್ಲಿ ಶೇ.75ರಷ್ಟು ನೀರು ಸಂಗ್ರಹವಾಗಿದೆ.