ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್, ಪವಿತ್ರಾಗೌಡ ಸೇರಿ 13 ಆರೋಪಿಗಳು 6 ದಿನ ಪೊಲೀಸ್ ಕಸ್ಟಡಿಗೆ

Spread the love

ಬೆಂಗಳೂರು : ನಟಿ ಪವಿತ್ರ ಗೌಡಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ ಹಿನ್ನೆಲೆಯಲ್ಲಿ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಗೆ ಬಿಗ್ ಶಾಕ್ ಎದುರಾಗಿದ್ದು, ದರ್ಶನ್, ಪವಿತ್ರಾಗೌಡ ಸೇರಿ 13 ಆರೋಪಗಳನ್ನ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಹೊರಡಿಸಿದೆ.

ಇಂದು ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ A1 ಆರೋಪಿ ನಟಿ ಪವಿತ್ರಗೌಡ ಹಾಗೂ A2 ಆರೋಪಿ ನಟ ದರ್ಶನ್ ಗೆ ಜಡ್ಜ್ ಪ್ರಶ್ನೆ ಕೇಳಿದ್ದು, ನಿಮ್ಮನ್ನು ಎಷ್ಟು ಗಂಟೆಗೆ ಎಲ್ಲಿ ಬಂಧಿಸಿದರೆಂದು ಕೇಳಿದಾಗ ಉತ್ತರಿಸಿದ ಅವರು, ಮಧ್ಯಾಹ್ನ 3 ಗಂಟೆಗೆ ಪೊಲೀಸ್ ಠಾಣೆಯಲ್ಲಿ ಬಂಧಿಸಿದ್ದಾರೆ ಎಂದು ನಟ ದರ್ಶನ್ ಪವಿತ್ರ ಗೌಡ ತಿಳಿಸಿದರು.
ಪೊಲೀಸರು ನಿಮಗೆ ಏನಾದರೂ ತೊಂದರೆ ಕೊಟ್ರ ಎಂದು ಕೇಳಿದಾಗ, ಪೊಲೀಸರು ಯಾವುದೇ ತೊಂದರೆ ಕೊಟ್ಟಿಲ್ಲವೆಂದು ಉತ್ತರಿಸಿದ್ದಾರೆ. ವಕೀಲರನ್ನು ನೇಮಿಸಿಕೊಳ್ಳುತ್ತೀರ ಎಂದು ಜಡ್ಜ್ ಪ್ರಶ್ನೆ ಮಾಡಿದ್ದು,ನೇಮಿಸಿಕೊಳ್ಳುತ್ತೇವೆ ಎಂದು ಉತ್ತರಿಸಿದ್ದಾರೆ. ಮನೆಯವರಿಗೆ ಬಂಧನದ ಮಾಹಿತಿ ನೀಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ ಜೆಡಿಎಸ್ ಪ್ರಶ್ನೆಗೆ ನಟ ದರ್ಶನ್ ಹೌದು ಎಂದು ಉತ್ತರಿಸಿದ್ದಾರೆ.
ಇದೇ ವೇಳೆ ಪೊಲೀಸರು ಆರೋಪಿಗಳನ್ನು 14 ದಿನ ಕಸ್ಟಡಿಗೆ ನೀಡಿ ಎಂದು ಮನವಿ ಮಾಡಿದ್ದಾರೆ. ಕಿಡ್ಯಾಪ್ ಮಾಡಿ ಕರೆದೊಯ್ದಿದ್ದಾರೆ. ಹಾಗಾಗಿ ಎಲ್ಲಾ ಕಡೆ ಸ್ಥಳ ಮಹಜರು ಮಾಡಬೇಕು. ಕೊಲೆಯಾದ ಸ್ಥಳ, ಶವ ಎಸದ ಜಾಗದಲ್ಲಿ ಸ್ಥಳ ಮಹಜರು ನಡೆಸಬೇಕಿದೆ. ಎಲ್ಲೆಲ್ಲಿ ಹೊಡೆದಿದ್ದಾರೆ ಇದೆಲ್ಲ ತನಿಖೆ ಆಗಬೇಕು.ಪೆಪನ್ ಸೀಜ್ ಮಾಡಬೇಕು ಹೀಗಾಗಿ ಕಸ್ಟಡಿ ಅಗತ್ಯವಾಗಿದೆ. ಹಾಗಾಗಿ ಆರೋಪಿಗಳನ್ನು 14 ದಿನ ಪೊಲೀಸ್ ಕಸ್ಟಡಿಗೆ ನೀಡಿ ಎಂದು ಪೊಲೀಸರು ಜಡ್ಜ್ ಗೆ ಮನವಿ ಮಾಡಿಕೊಂಡಿದ್ದಾರೆ.
ಇದೇ ವೇಳೆ ತನಿಖಾಧಿಕಾರಿ ವಾದಕ್ಕೆ ದರ್ಶನ್ ಪರ ವಕೀಲ ನಾರಾಯಣ ಸ್ವಾಮಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು ಪಿಪಿ ವಾದಿಸಬೇಕು. ತನಿಖಾಧಿಕಾರಿಯಾಗಿ ವಾದಿಸುತ್ತಿದ್ದಾರೆ ಎಂದು ದರ್ಶನ್ ಪರ ವಕೀಲ ನಾರಾಯಣಸ್ವಾಮಿ ಪ್ರಶ್ನಿಸಿದರು. ಜಡ್ಜ್ ಎದುರು ಇದೇ ವೇಳೆ ಪವಿತ್ರ ಗೌಡ ಹಾಗೂ ನಟ ದರ್ಶನ್ ಕಣ್ಣೀರು ಹಾಕಿರುವ ಘಟನೆ ಕೂಡ ನಡೆಯಿತು.